![Screenshot_2023_1213_130853](https://tungataranga.com/wp-content/uploads/2023/12/Screenshot_2023_1213_130853.jpg)
ಶಿವಮೊಗ್ಗ, ಫೆಬ್ರವರಿ 22 (ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24 ನೇ ಸಾಲಿಗೆ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಪ್ರವರ್ಗ-1, ಎಸ್ಸಿ ಮತ್ತು ಎಸ್ಟಿ ಆದಾಯ ಮಿತಿ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗಗಳ ಆದಾಯ ಮಿತಿ ರೂ.1.00 ಲಕ್ಷ ಗಳು ಇರುತ್ತದೆ.
![](http://tungataranga.com/wp-content/uploads/2023/11/Screenshot_2023_1106_140821.jpg)
ಆಸಕ್ತ ವಿದ್ಯಾರ್ಥಿಗಳಿಂದ ಪ್ರವೇಶಾತಿ ಕಲ್ಪಿಸಲು ತಾಲೂಕು ಕಲ್ಯಾಣಾಧಿಕಾರಿಗಳು SHP ಲಾಗಿನ್ನಲ್ಲಿ ಫೆ.29 ರೊಳಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಹಾಗೂ ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ಸೈಟ್ www.bcwd.karnataka.gov.in ನ್ನು ವೀಕ್ಷಿಸುವುದು.
![](http://tungataranga.com/wp-content/uploads/2024/02/a72ad88a-1466-4741-a6de-daae533cf86e.jpeg)
![](http://tungataranga.com/wp-content/uploads/2024/02/5923f46a-41b4-487b-96e1-7af893686bd8.jpeg)
ತಾಂತ್ರಿಕ ತೊಂದರೆಗಳಾದಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ bcwd.hostels@karnataka.gov.in ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ಹಾಗೂ ಸಹಾಯವಾಣಿ ಸಂಖ್ಯೆ 805077005/08182-222129, ಶಿವಮೊಗ್ಗ -08182-240078, ಭದ್ರಾವತಿ-08282-264644, ತೀರ್ಥಹಳ್ಳಿ- 08181-296096, ಸಾಗರ-08183-298014, ಸೊರಬ- 08184- 295893, ಹೊಸನಗರ- 08185- 295050 ಹಾಗೂ ಶಿಕಾರಿಪುರ- 08187-295207 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆ ತಿಳಿಸಿರುತ್ತಾರೆ.