![Yogesh-1-683x1024](https://tungataranga.com/wp-content/uploads/2023/12/Yogesh-1-683x1024-1.jpg)
ಶಿವಮೊಗ್ಗ,ಫೆ.೨೨: ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿಗಳ ಜಿಲ್ಲಾ ಫಲಾನುಭವಿಗಳ ಸಮಾವೇಶ ಫೆ.೨೪ರಂದು ಶಿವಮೊಗ್ಗದ ಫ್ರೀಡಂಪಾರ್ಕ್ನ ಅಲ್ಲಮಪ್ರಭು ಬಯಲು ಮಂಟಪದಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಶಿವಮೊಗ್ಗ ನಗರದಲ್ಲಿ ಸುಮಾರು ೧೫ ಸಾವಿರಕ್ಕೂ ಹೆಚ್ಚು ಅಹ್ವಾನ ಪತ್ರಿಕೆಯನ್ನು ಮನೆ ಮನೆಗೆ ಹಂಚಿದ್ದು ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರು ನಗರವೊಂದರಿಂದಲೇ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಹೆಚ್.ಸಿ.ಯೋಗೀಶ್ ಹೇಳಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿಗಳು ಕೂಡ ಯಶಸ್ವಿಯತ್ತ ಸಾಗುತ್ತಿವೆ. ಶಿವಮೊಗ್ಗ ನಗರದಲ್ಲಿಯೇ ೬೨ ಸಾವಿರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇದ್ದಾರೆ. ೬೨ ಸಾವಿರ ಮನೆಗಳಿಗೆ ಉಚಿತ ವಿದ್ಯುತ್ ಇದೆ. ಸುಮಾರು ೬೧ಲಕ್ಷ ಬಾರಿ ನಗರದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ೧೦೦ ಕ್ಕೂ ಹೆಚ್ಚು ಜನರು ಯುವನಿಧಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ೫೧ ಸಾವಿರಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಅಕ್ಕಿಯ ಹಣ ಜಮಾ ಆಗಿದೆ ಎಂದು ವಿವರಿಸಿದರು.
![](http://tungataranga.com/wp-content/uploads/2023/11/Screenshot_2023_1106_140821.jpg)
ಶಿವಮೊಗ್ಗದಲ್ಲಿ ಅಂದು ಬೆಳಿಗ್ಗೆ ೧೧ಗಂಟೆಗೆ ನಡೆಯುವ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಅಧಿಕಾರಿಗಳು ಇರುತ್ತಾರೆ. ಅಂದು ಡಿ.ಕೆ.ಶಿವಕುಮಾರ್ ಅವರಿಗೆ ’ಪಂಚ ಗ್ಯಾರಂಟಿಗಳ ಹಾರ’ವನ್ನು ಹಾಕಲಾಗುವುದು. ಈ ಹಾರ ತುಂಬ ವಿಶೇಷವಾಗಿದ್ದು, ಗ್ಯಾರಂಟಿಗಳ ಮಹತ್ವವನ್ನು ಬಿಂಬಿಸುತ್ತವೆ ಎಂದರು.
![](http://tungataranga.com/wp-content/uploads/2024/02/5923f46a-41b4-487b-96e1-7af893686bd8.jpeg)
![](http://tungataranga.com/wp-content/uploads/2024/02/a72ad88a-1466-4741-a6de-daae533cf86e.jpeg)
ಚುನಾವಣೆಗೂ ಮುನ್ನ ಗ್ಯಾರಂಟಿಗಳ ಪ್ರಚಾರದಲ್ಲಿ ನಾವು ಬಹುದೊಡ್ಡ ಆಂದೋಲನವನ್ನೇ ಹಮ್ಮಿಕೊಂಡಿದ್ದೇವು. ಈ ೫ ಗ್ಯಾರಂಟಿಗಳ ಪ್ರಭಾವದಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿರೋಧ ಪಕ್ಷಗಳು ಏನೇ ಹೇಳಿದರೂ ಗ್ಯಾರಂಟಿಗಳ ಜನಪ್ರಿಯತೆ ಕುಗ್ಗಿಲ್ಲ. ಇದು ಮತ್ತಷ್ಟು ವಿಸ್ತಾರವಾಗಿದೆ. ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮದ ನಂತರ ಈಗ ಮತ್ತೊಮ್ಮೆ ಬಹುದೊಡ್ಡ ಸಮಾವೇಶ ನಡೆಯುತ್ತಿವೆ. ನಮ್ಮ ತಂಡ ಮನೆ ಮನೆಗೂ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತಿದೆ. ಫಲಾನುಭವಿಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಬರಬೇಕೆಂದು ಮನವಿ ಮಾಡಿದರು.
![](http://tungataranga.com/wp-content/uploads/2024/02/IMG-20240217-WA0035-3.jpg)
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಪಿ.ದಿನೇಶ್, ಶಿವಕುಮಾರ್, ಕೆ.ರಂಗನಾಥ್, ಸುವರ್ಣ ನಾಗರಾಜ್, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ಅಲ್ತಾಫ್ ಪರ್ವಿಜ್, ಮಂಜುಳಾ, ರೇಷ್ಮಾ, ಮಧು, ಚಿನ್ನಪ್ಪ ಮುಂತಾದವರಿದ್ದರು.