ಶಿವಮೊಗ್ಗ: ಇಲ್ಲಿನ ಜೀವನದಿ ತುಂಗಾ ಜಲಾಶಯದಿಂದ ಇಂದು ಹೆಚ್ಚವರಿ ನೀರನ್ನು ಹೊರಬಿಡಲಾಯಿತು. ತುಂಬಿದ ತುಂಗೆಯ ಅಂಗಳದಿಂದ ನೀರನ್ನು ಬಿಟ್ಟ ಸನ್ನಿವೇಶ ನಯನ ಮನೋಹರವಾಗಿತ್ತು.
ಪ್ರಸಕ್ತ ೫೮೮.೨೪ ಮೀಟರ್ ಹೊಂದಿರುವ ತುಂಗಾ ನದಿಯಲ್ಲಿ ಇಂದು ೫೮೭.೬೯ ಮೀಟರ್ ನೀರಿದ್ದು, ೫೫೪೯ಕ್ಯೂಸೆಕ್ಸ್ ನೀರು ಒಳ ಬರುತ್ತಿರುವುದರಿಂದ ನೀರು ಬಿಡುವ ನಿರ್ಧಾರಕ್ಕೆ ಬರಲಾಗಿದೆ.
ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಗೆಯ ಅಂಗಳ ತುಂಬುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೫೮೪.೦೪ ಮೀಟರ್ ನೀರಿತ್ತು. ಈ ವರ್ಷ ಆ ಪ್ರಮಾಣಕ್ಕಿಂತ ಕಡಿಮೆ ನೀರಿದ್ದರು ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಭದ್ರಾ ಮಾಹಿತಿ: ಭದ್ರಾ ಅಣೆಕಟ್ಟೆಯಲ್ಲಿ ಇಂದು ೧೩೫ ಅಡಿ ನೀರಿದ್ದು, ೩೧೪೫ ಕ್ಯೂಸೆಕ್ಸ್ ಒಳ ಹರಿವಿದೆ. ಹೊರ ಹರಿವು ೧೫೯ ಕ್ಯೂಸೆಕ್ಸ್ ಆಗಿದ್ದು, ಇಂದಿನ ಸಾಮರ್ಥ್ಯ ೨೩.೬೧೪ ಟಿಎಂಸಿ ಆಗಿದೆ. ಕಳೆದ ವರ್ಷ ಇದೆ ಹೊತ್ತಿಗೆ ೧೨೪.೨ ಅಡಿ ನೀರಿದ್ದು, ಅಂದಿನ ಸಾಮರ್ಥ್ಯ ೧೭.೫೫೯ ಟಿಎಂಸಿ ಇತ್ತು. ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರೆ ನಯನ ಮನೋಹರ ದೃಶ್ಯಗಳಲ್ಲಿ ಕಂಗೊಳಿಸುತ್ತಿದೆ.