ಶಿವಮೊಗ್ಗ: ಶಿಕಾರಿಪುರ ಡಿಸಿಸಿ ಬ್ಯಾಂಕಿನವರು ಹರಾಜು ಮಾಡಿದ್ದ ಮೂರು ಅಂತಸ್ತಿನ ಕಟ್ಟಡದ ವನ್ನು ತಾನು ತೆಗೆದುಕೊಂಡಿದ್ದು ಪೂರ್ಣಗೊಂಡು ೭ ವರ್ಷ ಪೂರ್ಣಗೊಂಡಿದ್ದರೂ ಈವರೆಗೂ ತನಗೆ ಕಟ್ಟಡ ಹಸ್ತಾಂತರಿಸಿಲ್ಲ. ಬ್ಯಾಂಕ್ಗೆ ಈ ಕುರಿತು ಕೇಳಲು ಹೋದಾಗ ನೀವು ಬ್ಯಾಂಕ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಎಂದು ಹೇಳುತ್ತಿದ್ದಾರೆ ಎಂದು ಖರೀದಿ ಮಾಡಿ ನೊಂದಿರುವ ಎಸ್ ಪಿ ಸಂತೋಷ್ಕುಮಾರ್ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ಡಿಸಿಸಿ ಬ್ಯಾಂಕ್ನಲ್ಲಿ ನಕಲಿ ಬಂಗಾರದ ಹಗರಣ ಆಗಿರುವಂತೆ ಸದರಿ ಪ್ರಕರಣದಲ್ಲಿ ಆಸ್ತಿಯ ಮೌಲ್ಯ ಪಡೆಯುವಾಗ ನಕಲಿ ದಾಖಲೆ ತೋರಿಸಿ ಸಾಲವನ್ನು ನೀಡಲಾಗಿದೆ. ಅದರಲ್ಲಿ ಬ್ಯಾಂಕ್ ವ್ಯವಸ್ಥಾಪಕರು, ಆಡಳಿತ ಮಂಡಳಿ ನೇರವಾಗಿ ಶಾಮೀಲಾಗಿದೆ ಎನ್ನುವುದು ತನ್ನ ಆರೋಪ, ನ್ಯಾಯಾಲಯಕ್ಕೆ ಹೋಗಬೇಕು ಎನ್ನುವ ಉಡಾಫೆ ಉತ್ತರ ನೀಡುತ್ತಿರುವ ಬ್ಯಾಂಕ್ ಮೇಲೆ ಗ್ರಾಹಕರು ಯಾವುದೇ ನಂಬಿಕೆ ಇಡಬೇಡಿ ಎಂದು ಅವರೇ ಹೇಳುತ್ತಿದ್ದಾರೆ ಅದು ಇಡೀ ಜಿಲ್ಲೆಯ ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದರು.
ಬ್ಯಾAಕ್ಗೆ ನಾನು ಹಣ ಕಟ್ಟಿದ್ದು ನನಗೆ ನ್ಯಾಯ ಒದಗಿಸಬೇಕಿರುವುದು ಬ್ಯಾಂಕ್ ವಿನಃ ನ್ಯಾಯಾಲಯ ಅಲ್ಲ, ಒಂದು ವೇಳೆ ನಾನು ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಪಡೆದರೂ ಆಗ ಬ್ಯಾಂಕ್ ಷೇರುದಾರರ ಹಣವನ್ನು ನನಗೆ ನೀಡುತ್ತದೆ ವಿನಃ ತಪ್ತಿತಸ್ಥ ಅಧಿಕಾರಿಗಳಿಗೆ ಯಾವುದೆ ತೊಂದರೆ ಆಗುವುದಿಲ್ಲ. ಈ ಪ್ರಕರಣ ಗಮನಿಸಿದಾಗ ಡಿಸಿಸಿ ಬ್ಯಾಂಕ್ನಲ್ಲಿ ಇನ್ನೆಷ್ಟು ಇಂತಹ ನಕಲಿ ದಾಖಲೆ ಇಟ್ಟು ಸಾಲ ನೀಡಿದ್ದಾರೋ ಗೊತ್ತಿಲ್ಲ. ಆ ಕುರಿತು ಸಿಬಿಐ ಅಥವಾ ಸಿಒಡಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು, ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹರಾಜಿನಲ್ಲಿ ಮೂರು ಜನ ಪಾಲ್ಗೊಂಡಿದ್ದು ಅದರಲ್ಲಿ ಮೇಲ್ಕಂಡ ಎಲ್ಲ ಆಸ್ತಿಯನ್ನು ೭೬ಲಕ್ಷ ರೂಗೆ ನಾನು ಅತಿಹೆಚ್ಚು ಹಣಕ್ಕೆ ಬಿದ್ದು ಮಾಡಿದ್ದರಿಂದಾಗಿ ಯಶಸ್ವಿ ಬಿಡ್ಡುದಾರನಾಗಿದ್ದೆ. ಹರಾಜು ದಿನದಂದು ನಾನು ೧೦,೬೫,೦೦೦-೦೦ ರೂಗಳನ್ನು ಸ್ಥಳದಲ್ಲಿ ಪಾವತಿಸಿದ್ದೆನು. ಹರಾಜು ನಿಯಮದಂತೆ ೪೫ದಿನಗಳ ಒಳಗೆ ಇನ್ನುಳಿದ ೬೦,೩೫,೦೦೦-೦೦ ರೂಗಳನ್ನು ದಿನಾಂಕ ೨೪-೪-೨೦೧೭ಕ್ಕೆ ಬ್ಯಾಂಕ್ಗೆ ಪಾವತಿಸಿದ್ದೇನೆ. ಮತ್ತು ಆಸ್ತಿ ನೋಂದಣಿಗಾಗಿ ದಿನಾಂಕ ೫-೫-೨೦೧೭ ರಿಜಿಸ್ಟೇಷನ್ಗಾಗಿ ೪,೬೮,೬೦೦-೦೦ರೂಗಳನ್ನು ಪಾವತಿಸಿದ್ದೇನೆ ಎಂದು ವಿವರಿಸಿದರು.
ತನಗೆ ಆಸ್ತಿಯನ್ನು ಕೂಡಲೆ ಬಿಡಿಸಿಕೊಡಬೇಕು. ಅಂದಿನ ಹರಾಜು ಅಧಿಕಾರಿ ಜಿ.ವಾಸುದೇವ್, ಮ್ಯಾನೇಜರ್ ರಂಗಪ್ಪ ಅವರಿಂದ ನನಗೆ ನಷ್ಟ ಪರಿಹಾರ ಕೊಡಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮಕ್ಕೆ ಕೂಡಲೆ ಮುಂದಾಗಬೇಕು. ಇಲ್ಲದಿದ್ದರೆ ನಾನು ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತ ಧರಣಿ ನಡೆಸುತ್ತೇನೆ. ಸಾಲ ಬಾಧೆಯಿಂದ ಬಳಲುತ್ತಿರುವ ನನಗೆ ದಯಾಮರಣ ನೀಡಿ ನನ್ನ ಕುಟುಂಬ ನಿರ್ವಹಣೆಯನ್ನು ಜವಾಬ್ದಾರಿ ಸರಕಾರವೇ ಹೊತ್ತುಕೊಳ್ಳಬೇಕು.-
-ಸಂತೋಷ್ಕುಮಾರ್, ನೊಂದ ಖರೀದಿದಾರ