ಬೆಂಗಳೂರು,ಡಿ.23:
ಬರುವ ಮಾರ್ಚ್ 2021 ರಲ್ಲಿ ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಚಿತಪಡಿಸಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಸುರೇಶ್ ಕುಮಾರ್, ‘ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮವನ್ನ ಅಂತಿಮ ಗೊಳಿಸಲಾಗುತ್ತಿದ್ದು, ಕನಿಷ್ಟ ಕಲಿಕೆಗೆ ಒತ್ತು ನೀಡಲಾಗುತ್ತದೆ. ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿರಿಯ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅವಶ್ಯಕತೆಗಳನ್ನ ಸಹ ಗಮನದಲ್ಲಿಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಹೊತ್ತಿಗೆ ಆನ್ ಲೈನ್ ನೆಪದಲ್ಲಿ ಮೊಬೈಲ್ ಲೋಕದಲ್ಲಿ ಬಂಧಿಯಾದ ಮಕ್ಕಳ ಸ್ಥಿತಿ ಏನು…? ಇನ್ನೂ ಸಿಲಬಸ್ ನೋಡ್ತೇನೆ ಅನ್ನೋ ಹೇಳಿಕೆ ನೀಡಿದ್ದನ್ನು ನೋಡಿದರೆ ಮಕ್ಕಳನ್ನು ಸಂಪೂರ್ಣ ಹಳ್ಳ ಹತ್ತಿಸಿದ ಕೀರ್ತಿಗೆ ಶಿಕ್ಷಣ ಇಲಾಖೆಯೇ ಪಾತ್ರವಾಗುತ್ತಿದೆ ಎಂಬ ಇನ್ನೊಂದಿಷ್ಟು ವಿವರ ಮುಂದಿನ ವರದಿಯಲ್ಲಿ ನಿರೀಕ್ಷಿಸಿ.