ಜೆಶಿವಮೊಗ್ಗ,ಜ.೩೧:
ಶಿವಮೊಗ್ಗ ನಗರ ಜೆಡಿಎಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.
ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಶಿವಮೊಗ್ಗ ನಗರದಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಗರ ಸಮಿತಿ ಅಧ್ಯಕ್ಷರೊಡನೆ ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ತಕ್ಷಣದಿಂದಲೇ ಕಾರ್ಯೋನ್ಮುಖರಾಗುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ನಗರ ಉಪಾಧ್ಯಕ್ಷರನ್ನಾಗಿ ಮಾಧವ ಮೂರ್ತಿ, ದಯಾನಂದ ಸಿ. ಎಸ್., ಗಣೀಶ್ ಹೆಚ್.ಜಿ., ಸುನಿಲ್‌ಕುಮಾರ್.ಟಿ.ವಿ, ಮನೋಹರ್ ಆರ್., ಸಯ್ಯದ್ ಮುಜೀಬುಲ್ಲಾ, ಮಹಮ್ಮದ ನಜಿರ್, ಶಾರ ದಮ್ಮ, ಮಹಾ ಪ್ರದಾನಕಾರ್ಯದರ್ಶಿ ವಿನಯ್ ಬಿ.ಎಸ್., ಪ್ರದಾನ ಕಾರ್ಯದರ್ಶಿಗಳನ್ನಾಗಿ ಚಂದ್ರಶೇ ಖರ್ ಎನ್. ಜಿ., ರವಿ ಕೆ., ಸ್ಯೆಮನ್ ರಾಜ್, ವನೇಶ್ ನಾಯ್ಕ್, ಅರುಣ್ ಜಿ.ರಾವ್ , ರಮೇಶ್, ಅವಿನಾಶ್ ಬಿ., ಮಧು, ಹೆಚ್.ಎಂ. ಮಂಜುನಾಥ್ ಗೌಡ, ಲೋಹಿತ.ಎನ್. ಬಿ., ಗೋವಿಂದರಾಜ್ ಪಿ., ಚಂದ್ರಶೇಖರ್ ಬಿ., ಪ್ರವೀಣ್ ಎಂ., ದೇವ ರಾಜ್ ಎಚ್. ಕೆ., ನರಸಿಂಹ ಎಸ್. ಪಿ., ಮಹ ಮ್ಮದ್ ರಫೀಕ್
ಬಿ. ಎನ್. , ದಿನೇಶ್, ಶಂಕರ್ ಆರ್. ಎಂ., ಹಾಗು ಕಾರ್ಯದರ್ಶಿಗಳನ್ನಾಗಿ ಬಾಬು ಲಕ್ಷ್ಮಣ್, ಜ್ಞಾನ ಪ್ರಕಾಶ್ , ಗುರು, ಹರೀಶ್ , ಸಂತೋಷ , ಮಂಜುನಾಥ್ ಎಂ., ಸಂತೋಷ್ ಎಂ., ಪ್ರಫುಲ್ ಚಂದ್ರ, ಹರೀಶ್ ವಿ., ನೂತನ್, ವಾಣಿ, ಪಲ್ಲವಿ, ಮುಂತಾಜ್ ಬಾನು, ಗೋಪಿ ಎಂ., ಮೊದಲಿಯರ್, ಸಂದೇಶ ಎಂ.ಎಸ್., ಶಿವಕುಮಾರ್, ಶ್ರೀನಿವಾಸ್ ಜಿ., ಪವನ್ ಕುಮಾರ್ ಮತ್ತು ಖಜಾಂಚಿಯಾಗಿ ಶಿವಕುಮಾರ್ ರವರನ್ನು ನೇಮಕ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯವರನ್ನು ಜೆಡಿಎಸ್ ಕೋರ್ ಕಮಿಟಿಯ ಸದಸ್ಯ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದಲ್ಲಿ ಭೇಟಿ ಮಾಡಿ ಶಿವಮೊಗ್ಗ ನಗರ ಜೆಡಿಎಸ್ ಸಮಿತಿಗೆ ನೂತನ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ಪಡೆದರು.
ಈ ಸಂದರ್ಭದಲ್ಲಿ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಗಂಧದಮನೆ ನರಸಿಂಹ, ಶ್ಯಾಮ್, ಸಂಜಯ್ ಕಶ್ಯಪ್ ಹಾಗೂ ಇನ್ನಿತರರು ಹಾಜರಿದ್ದರು.