ಶಿವಮೊಗ್ಗ, ಜ.29:
ಕಳೆದ ಮೂರುದಿನಗಳ ಕಾಲ ನಡೆದ ಟೀಮ್ ಮಾಧ್ಯಮ ಇವರ ಆಶ್ರಯದ ಅಂತರಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಮಾಧ್ಯಮ ಕಪ್ ನಲ್ಲಿ ರಾಜ್ಯದ ಹಲವು ತಂಡಗಳು ಭಾಗವಹಿಸಿದ್ದವು.
ಈ ಪಂದ್ಯಾವಳಿಯು ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ನಡೆಸಲಾಗಿತ್ತು. ನಾನಾ ಜೆಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು.
ಭಾಗವಹಿಸಿದ್ದ ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು, ಒಂದೊAದು ಗುಂಪಿನಿAದಲೂ ಒಂದೊAದು ತಂಡ ನೆರವಾಗಿ ಸೆಮಿಫೈನಲ್ಸ್ ಹಂತವನ್ನು ತಲುಪಿದ್ದವು. ಮೂರೂ ದಿನಗಳ ಕಾಲ ಬೆಳಿಗ್ಗೆ ಎಂಟರಿAದ ಸಂಜೆ ಐದು ಮುವತ್ತರವರೆಗೆ ಪಂದ್ಯಗಳು ನಡೆದವು.
ಅಂತಿಮವಾಗಿ ಟೀಮ್ ಮಾಧ್ಯಮ ಕಪ್ ನ ಹಣಾಹಣ ಯಲ್ಲಿ ಅವಿ ಬಾಯ್ಸ್ . ಎಮ್ ಸಿಸಿ ಕ್ರಿಕೆಟರ್ಸ್, ಜಿಸಿಎಸ್ ಸಹನಾ ಕ್ರಿಕೆಟರ್ಸ್ ಮತ್ತು ಜೈ ಹಿಂದ್ ಕ್ರಿಕೆಟರ್ಸ್ ಎಂಬ ನಾಲ್ಕು ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಬಂದಿದ್ದವು.
ರೋಚಕವಾಗಿ ನೆಡೆದ ಎರಡು ಸೆಮಿಫೈನಲ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಜೈ ಹಿಂದ್ ಮತ್ತು ಜಿಸಿಎಸ್ ಸಹನಾ ತಂಡಗಳು ಅಂತಿಮ ಹಣಾಹಣ ಯ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದವು.
ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ 50,000 ಸಾವಿರದ ಪ್ರಥಮ ಸ್ಥಾನದ ಪಂದ್ಯ ರೋಚಕವಾಗಿ ನಡೆಯಿತು. ಪ್ರಬಲ ಜೈ ಹಿಂದ್ ತಂಡ ಎದುರಾಳಿ ಜಿಸಿಎಸ್ ಸಹನಾ ತಂಡವನ್ನು ಸೋಲಿಸಿ ಟೀಮ್ ಮಾಧ್ಯಮ ಕಪ್ ಅನ್ನು ತನ್ನದಾಗಿಸಿಕೊಂಡಿತು.
ಸೆಮಿಫೈನಲ್ಸ್ ಹಂತದಲ್ಲಿ ಸೋಲಿನ ಕಹಿ ಅನುಭವಿಸಿದ ಜಿಸಿಎಸ್ ಸಹನಾ ತಂಡ ದ್ವೀತಿಯ ಬಹುಮಾನವಾಗಿ ಆಕರ್ಷಕ ಟ್ರೋಫಿಯ ಜೊತೆಗೆ 25,000 ಸಾವಿರ ನಗದನ್ನು ತನ್ನದಾಗಿಸಿಕೊಂಡಿತು.
ಸೆಮಿಫೈನಲ್ಸ್ ನಲ್ಲಿ ಸೋಲುಕಂಡ ಅವಿ ಬಾಯ್ಸ್ ಮತ್ತು ಎಮ್ ಸಿಸಿ ತಂಡಗಳು ತಲಾ 7000 ಸಾವಿರ ನಗದು ಮತ್ತು ಪಾರಿತೋಷಕವನ್ನು ಪಡೆದುಕೊಂಡವು.
ಈ ಪಂದ್ಯಾವಳಿಯಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿ ಸರಣ ಶ್ರೇಷ್ಟರಾದ ಜೈ ಹಿಂದ್ ತಂಡದ ಉತ್ತಪ್ಪ ಆಕರ್ಷಕ ಟ್ರೋಫಿಯ ಜೊತೆಗೆ 3,000 ನಗದನ್ನು ತನ್ನದಾಗಿಸಿಕೊಂಡರು.ಉತ್ತಮ ಬೌಲರ್ ಪ್ರಶಸ್ತಿಯನ್ನು ಬಿಜಿಎಸ್ ಸಹನಾ ತಂಡದ ರೋಶನ್ ಮತ್ತು ಇದೇ ತಂಡದ ಪ್ರತಾಪ್ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇಬ್ಬರಿಗೂ ತಲಾ ಎರಡು ಸಾವಿರ ನಗದು ಮತ್ತು ಪಾರಿತೋಷಕವನ್ನು ನೀಡಲಾಯಿತು.
ಅಂತಿಮ ಹಂತದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ( ಚನ್ನಿ ), ಮತ್ತು ಮಾಜಿ ಸಂಸದರಾದ ಆಯನೂರು ಮಂಜುನಾಥ್, ಡಿವೈಎಸ್ಪಿ ಸುರೇಶ್, ಕಾಂಗ್ರೆಸ್ ಮುಖಂಡರಾದ ವೈ ಹೆಚ್ ನಾಗರಾಜ್, ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ, ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ, ನಿಕಟ ಪೂರ್ವ ಕಾರ್ಪೊರೇಟರ್ ಮಂಜುನಾಥ್, ಮಲೆನಾಡು ಕೋ ಆಪರೇಟಿವ್ ಸೊಸೈಟಿಯ ಸದಸ್ಯ ಈಶ್ವರ್ ಅವರು ವೇದಿಕೆಯಲ್ಲಿ ಹಾಜರಿದ್ದು ಈ ಪಂದ್ಯಾವಳಿಯ ಬಗ್ಗೆ ಮಾತಾನಾಡಿ ವಿಜೇತರಿಗೆ ಆಭಿನಂದಿಸಿ ಬಹುಮಾನ ವಿತರಿಸಿದರು.
ಈ ಒಂದು ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ಮೂರುದಿನಗಳ ಕಾಲ ಯಶಸ್ವಿಯಾಗಿ ನೆಡೆದು ಎಲ್ಲರ ಮೆಚ್ಚುಗೆಗೆ ಕಾರಣವಾಯ್ತು. ಈ ಒಂದು ಪಂದ್ಯಾವಳಿಯನ್ನು ಆಯೋಜಿಸಿದ್ದ ಟೀಮ್ ಮಾಧ್ಯಮದ ಎಸ್. ಕೆ. ಗಜೇಂದ್ರಸ್ವಾಮಿ, ಸುಧೀರ್ ಕುಮಾರ್ ಎಸ್ ವೈ (ವಿಧಾತ ಸುಧೀರ್) ಚಂದ್ರಶೇಖರ್ ಜಿ, ಶಿ ಜು ಪಾಶ ಹಾಗೂ ಜಿ ಪದ್ಮನಾಭ್ ಸೇರಿದ ಈ ಐವರ ತಂಡಕ್ಕೆ ಈ ಟೂರ್ನಿಯಲ್ಲಿ ಭಾಗವಹಿಸಿದ ತಂಡದ ಆಟಗಾರರು ಮತ್ತು ಬಹುಮಾನ ವಿತರಿಸಲು ಆಗಮಿಸಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಧ್ಯಕ್ಕೆ ಈ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದ್ದು ಮುಂಬರುವ ದಿನಗಳಲ್ಲಿ ಟೀಮ್ ಮಾಧ್ಯಮದ ಆಶ್ರಯದಲ್ಲಿ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿದೆ.
ಕೃತಜ್ಞತೆ: ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಆಟಗಾರರಿಗೆ ಪ್ರೇಕ್ಷಕರಿಗೆ, ಶಾರದಾದೇವಿ ಶಾಲಾ ಆಡಳಿತ ಮಂಡಳಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಮತ್ತು ನಗರದ ನಾಗರಿಕರಿಗೆ ಹಾಗೂ ಸಲಹೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಟೀಮ್ ಮಾಧ್ಯಮ ತಂಡದ ಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಬಾಕ್ಸ್ : ಕ್ರಿಕೆಟ್ ಕೇವಲ ಆಟವಲ್ಲ ಅದೊಂದು ಜೀವನದ ಪಾಠ. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಕೆಲವೊಮ್ಮೆ ರಕ್ಷಣಾತ್ಮಕ ಆಟ ಮುಖ್ಯವಾಗುತ್ತದೆ. ಕಷ್ಟಗಳೆಂಬ ಬಾಲುಗಳನ್ನು ಎದುರಿಸಬೇಕಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಭಾರಿಸಬೇಕಾಗುತ್ತದೆ. ಕ್ರಿಕಟ್ ಸಾಮರಸ್ಯ ನೀಡುತ್ತದೆ. ದೇಶ ಪ್ರೇಮ ಬೆಳೆಸುತ್ತದೆ. ಆರೋಗ್ಯವನ್ನು ನೀಡುತ್ತದೆ.
-ಆಯನೂರು ಮಂಜುನಾಥ್
2: ಕ್ರಿಕೆಟ್ ಸಾಮರಸ್ಯ ನೀಡುತ್ತದೆ ಎಂಬುವುದರಲ್ಲಿ ಯಾವ ಅನುಮಾನಗಳು ಇಲ್ಲ. ಇತ್ತಿಚೆಗೆ ರಾಗಿಗುಡ್ಡದಲ್ಲಿ ನಡೆದ ಅಹಿತಕರಿ ಘಟನೆಗೆ ಸಂಬAಧಿಸಿದAತೆ ಎಸ್.ಪಿ.ಯವರ ಮಾರ್ಗದರ್ಶನದಲ್ಲಿ ಅಲ್ಲೊಂದು ಪೊಲೀಸ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದ್ದರು. ಎಲ್ಲ ಧರ್ಮದವರು ಒಟ್ಟಾಗಿ ಟೀಮ್ ರಚಿಸಿ ಆಟ ಆಡಿದ್ದು ಅಲ್ಲಿ ಸಾಮರಸ್ಯ, ಶಾಂತಿ ನೆಲೆಸುವಂತೆ ಮಾಡಿದೆ.
-ಡಿ.ವೈ.ಎಸ್.ಪಿ.ಸುರೇಶ್
ಬಾಕ್ಸ್ 3 : ಕ್ರಿಕೆಟ್‌ನಲ್ಲಿ ಸೋಲು ಗೆಲುವು ಸಹಜ ಸಮಾನವಾಗಿ ಸ್ವೀಕರಿಸಿ, ಸೋತವರು ಗೆಲ್ಲಲು ಪ್ರಯತ್ನಿಸಿ ಗೆದ್ದವರು ಜಯವನ್ನು ಉಳಿಸಿಕೊಳ್ಳಲು ಬಯಸಿ. ಇದಕ್ಕಾಗಿ ನಿರಾಶೆ ಬೇಡ, ಕ್ರೀಡೆ ಮನಸ್ಸಿನ ಉದ್ವೇಗಗಳನ್ನು ಕಡಿಮೆ ಮಾಡುತ್ತದೆ.
-ಶಾಸಕ ಚೆನ್ನಬಸಪ್ಪ.
ಶಿವಮೊಗ್ಗ: ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ ಎಂದು ರಾಷ್ಟ್ರಪತಿಗಳ ಕುರಿತು ಸಿದ್ದರಾಮಯ್ಯ ಏಕವಚನ ಬಳಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರಪತಿಗಳು ಅವರು ದೇಶದ ಪ್ರಥಮ ಪ್ರಜೆ. ಮುಖ್ಯಮಂತ್ರಿಯಾಗಿ ಈ ರೀತಿ ಅಗೌರವ ತೋರುವುದು ಸರಿಯಲ್ಲ. ಅದು ಸಿದ್ದರಾಮಯ್ಯನವರಿಗೆ ಶೋಭೆ ತರೋದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಕೊಡಬೇಕು ಎಂದರು
ಮAಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ವಿಚಾರದ ಬಗ್ಗೆ ಮಾತನಾಡಿ, ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ಆಗಿದೆ. ಇನ್ನೂ ಅಂತಿಮ ಆಗಿಲ್ಲ ಎಂದರು.
ಸುಮಲತಾ ಅಂಬರೀಶ್ ಅವರ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ, ಸುಮಲತಾ ಬಿಜೆಪಿಗೆ ಸೇರಿದರೆ ಮಂಡ್ಯ ಕ್ಷೇತ್ರದ ಬಗ್ಗೆ ಪ್ರಶ್ನೆ ಬರಲ್ಲ. ಜೆಡಿಎಸ್ ಬಹುಶಃ ನಾಲ್ಕು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ನಾನು ಪರಿಷತ್ ಚುನಾವಣೆಗೆ ಆಕಾಂಕ್ಷಿ ಆಗಿದ್ದು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಹನುಮ ಧ್ವಜ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ರಾಮ ಮಂದಿರ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿದೆ. ವಿನಃ ಕಾರಣ ಬಿಜೆಪಿಯ ಮೇಲೆ ಆರೋಪ ಮಾಡಿದೆ ಎಂದರು.