ಶಿವಮೊಗ್ಗ,ಜ.೨೫: ತಮಿಳ್ ತಾಯ್ ಸಂಘಂ ವತಿಯಿಂದ ಜ.೨೮ರಂದು ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ತಮಿಳ್ ತಾಯ್ ಸಮುದಾಯ ಭವನದಲ್ಲಿ ಸಂಕ್ರಾಂತಿ ಸಂಭ್ರಮ-೨೦೨೪ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಂನ ಅಧ್ಯಕ್ಷ ಎಂ.ಪಿ.ಸಂಪತ್ ತಿಳಿಸಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ೧೧ಗಂಟೆಗೆ ತಿರುವಳ್ಳುವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪೊಂಗಲ್ ವಿತರಿಸಲಾಗುವುದು ಎಂದರು.
ಸಂಜೆ ೪ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ

ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಸಮಾಜ ಸೇವಕ ಎಂ.ಜಿ.ಆರ್.ಮಣಿ ಆಗಮಿಸಲಿದ್ದಾರೆ ಎಂದರು.


ನಂತರ ಚೆನೈನ ಚಲನಚಿತ್ರ ಹಿನ್ನಲೆಗಾಯಕರು ಮತ್ತು ವೃಂದದವರಿಂದ ಸುಗಮ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಪದ್ಮಶ್ರೀ ಟಿ.ಎಂ.ಸೌಂದರರಾಜನ್ ಮತ್ತು ಪಿಎಂಎಸ್ ಬಾಲರಾಜ್ ಹಾಗೂ ಜ್ಯೂನಿಯರ್ ಎಸ್‌ಪಿಬಿ ಸೆಲ್ವಮಣಿ ಇವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.


ಸಂಘಂನ ಗೌರವಾಧ್ಯಕ್ಷ ಡಿ.ರಾಜಶೇಖರಪ್ಪ ಮಾತನಾಡಿ, ೧೯೪೦ರಲ್ಲಿ ಸ್ಥಾಪನೆಯಾ ದ ಸಂಘ ೧೯೭೧ರಲ್ಲಿ ನೊಂದಣಿಯಾಗಿ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶ್ರಮಿಸುತ್ತಾ ಬಂದಿದೆ. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ

ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿ ಸಮುದಾಯ ಭವನ ನಿರ್ಮಿಸಿ ಸಮಾಜದವರಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಪ್ರತಿವರ್ಷ ಆಡಿಟ್ ಮಾಡಿಸಿ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗುತ್ತಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಎಸ್.ಮಂಜುನಾಥ್, ಪಿ.ವೆಂಕಟೇಶ್, ಎನ್.ಪಿಚ್ಚಾಂಡಿ, ಎನ್.ಏಳುಮಲೈ, ಎಸ್.ಕುಮಾರ್,ಆರ್. ಅರುಣಗಿರಿ, ಎಸ್.ಭರತ್, ಎಸ್.ಕೆ.ಷಣ್ಮುಗ, ಎನ್,ಜಯರಾಂ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!