ಶಿವಮೊಗ್ಗ: ಇಡೀ ವಿಶ್ವವನ್ನೆ ತಲ್ಲಣಗೊಳಿಸರುವ ಕೋವಿಡ್ 19 ಕೊರೊನಾ ಸೊಂಕಿತರ ಸಂಖ್ಯೆ ಮಲೆನಾಡನ್ನ ಅದರಲ್ಲೂ ಶಿವಮೊಗ್ಗವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ದಿನೇ ದಿನೇ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಮತ್ತೆ ಏಳು ಮಂದಿಗೆ ಸೊಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶತಕ ದಾಟಿದೆ.
ನಿನ್ನೆಯವರೆಗೆ 94 ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಿಗಧಿತ ಆಸ್ಪತ್ರೆಯಿಂದ ಸಾಕಷ್ಟು (54) ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈಗಿನ ಸಂಖ್ಯೆ 101ಕ್ಕೆ ಬಂದಿದೆ.
ನಿನ್ನೆ ಮತ್ತೆ ಪೊಲೀಸ್ ಬುಡದಲ್ಲಿ ಕಾಣಿಸಿಕೊಂಡಿದ್ದ ಸೊಂಕು ಇಂದು ಐವರು ಹಕ್ಕಿಪಿಕ್ಕಿ ಕ್ಯಾಂಪಲ್ಲಿ ಹಾಗೂ ವಂದನಾ ಟಾಕೀಸ್ ಬಳಿಯ ವೃದ್ದರಿಬ್ಬರಿಗೆ ಎನ್ನಲಾಗಿದೆ. ಇವರೆಲ್ಲಾ ಕ್ವಾರಂಟೈನ್ ನಲ್ಲಿದ್ದರು ಎಂಬುದೇ ಸದ್ಯದ ಸಮಾದಾನದ ಸಂಗತಿ. ಎಚ್ಚರವಷ್ಟೆ ನಮ್ದು.
ಮೂವರು ಸೀರಿಯಸ್: ಪ್ರಸಕ್ತ ಕೊರೊನಾ ಸೊಂಕಿತರಲ್ಲಿ ಮೂವರ ಪರಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ದಾಖಲೆಗಳು ತಿಳಿಸಿವೆ.
ರಾಜ್ಯದಲ್ಲಿಂದು 317 ಮಂದಿಗೆ ಕೊರೊನಾ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಒಟ್ಟು 317 ಮಂದಿಗೆ ಕೊರೋನಾ ವೈರಸ್ ಒಕ್ಕರಿಸಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 317 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದೂ ಕೂಡ ರಾಜ್ಯದಲ್ಲಿ 7 ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯಾದ್ಯಂತ ಇಂದು ಒಟ್ಟು 322 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದವರ ಸಂಖ್ಯೆ 4456ಕ್ಕೆ ಏರಿಕೆಯಾಗಿದೆ. ಉಳಿದಂತೆ ರಾಜ್ಯದಲ್ಲಿ ಪ್ರಸ್ತುತ 2976 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವ 72 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.