ಶಿವಮೊಗ್ಗ,ಡಿ.18:
ನಗರದ ಗಾಡಿಕೊಪ್ಪದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಗಲೀಕರಣಕ್ಕೆ ಬೇಕಾಗಿರುವ ಜಾಗಗಳಿಗೆ ಪರಿಹಾರ ಹಂಚುವ ವಿಚಾರದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜೊತೆ ಗ್ರಾಮಸ್ಥರು ಚರ್ಚೆನಡೆಸಿದರು.
ಗಾಡಿಕೊಪ್ಪದಲ್ಲಿ ಪರಿಹಾರ ನೀಡುವ ವಿಚಾರದಲ್ಲಿ 2012 ರಲ್ಲಿ ಪರಿಹಾರ ನೀಡದೆ ಕೇವಲ ಸಭೆ ಮಾತ್ರ ನಡೆಸುತ್ತಾ ಮುಂದೂಡುತ್ತಿದ್ದುದಕ್ಕೆ ಮಾತ್ರ ಸೀಮಿತವಾಗಿತ್ತು. ಪರಿಹಾರ ಪಡೆಯುವ ವಿಚಾರದಲ್ಲಿ ಜಿಲ್ಲಾಡಳಿತ ಮತ್ತುಗ್ರಾಮಸ್ಥರ ನಡುವೆ ಸರಿಹೊಂದುತ್ತಿರಲಿಲ್ಲ.
ಇಂದು ಜಿಲ್ಲಾಧಿಕಾರಿಕಚೇರಿಯಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿಗಳು ಚದರ ಅಡಿಗೆ 3800 ರೂ ನಿಗದಿಪಡಿಸಿದರು. ಅದನ್ನ ಸಚಿವರು 4 ಸಾವಿರ ರೂ ಪರಿಹಾರಕ್ಕೆ ಒಪ್ಪಿಗೆ ನೀಡಿದರು.
ಈಗ ಮನೆಗಳನ್ನ ಒಡೆಯಲಾಗಿದ್ದು ಅವರ ಪರಿಹಾರದ ಹಣವನ್ನ ಮೊದಲು ನೀಡಲು ಸಭೆ ತೀರ್ಮಾನಿಸಿತು.
ಇದಕ್ಕೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಒಪ್ಪಿಗೆ ನೀಡಿದರು. ಒಟ್ಟು ಇಲ್ಲಿ ಸುಮಾರು 82 ಜನ ಮಾಲೀಕರಿಗೆ ಪರಿಹಾರ ನೀಡಲು ಗುರುತಿಸಲಾಗಿದೆ.
ಪರಿಹಾರಕ್ಕೆ ಜಿಲ್ಲಾಡಳಿತದಲ್ಲಿ ಇದ್ದ ಹಣ 5.83 ಲಕ್ಷ ರೂ ಹಣವಿದ್ದು. ಉಳಿದ ಮೂರು ಕೋಟಿ ಹಣವನ್ನ ಸರ್ಕಾರದಿಂದ ಬಂದ ನಂತರ ಪರಿಹಾರ ನೀಡಲಾಗುವುದು ಎಂದು ಸಭೆ ತೀರ್ಮಾನಿಸಿತು.

By admin

ನಿಮ್ಮದೊಂದು ಉತ್ತರ

You missed

error: Content is protected !!