ದೇವರು ನೀಡಿದಂತಹ ಈ ಜೀವವು ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ ಎಂದು ಶಿವಮೊಗ್ಗ ಸಂಚಾರ ವೃತ್ತದ ಸರ್ಕಲ್ ಪೋಲಿಸ್ ಇನ್ಸಪೆಕ್ಟರ್ ಸಂತೋಷ ಕುಮಾರ ಹೇಳಿದರು.
ಅವರು ಪೂರ್ವ ಸಂಚಾರ ಪೋಲಿಸ್ ಠಾಣೆ, ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಸಯುಂಕ್ತಾಶ್ರ ಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಶಿಸ್ತು ಅತಿ ಮುಖ್ಯ ಆ ಶಿಸ್ತನ್ನೆ ಬಂಡವಾಳ ಮಾಡಿಕೊಂಡು ನಮ್ಮ ಜೀವನವನ್ನು ನಾವು ಸಾಗಿಸಬೇಕು ರಸ್ತೆಯಲ್ಲಿ ಓಡಾಡುವಾಗ ಸಂಚಾರ ನಿಯಮವನ್ನು ಪಾಲಿಸಿಕೊಂಡು ಅದಕ್ಕೆ ತಕ್ಕಂತೆ ನಾವು ಸ್ಪಂದಿಸಿದರೆ ದೆವರು ನೀಡಿದಂತಹ ಈ ಜೀವವು ಉಳಿಸಿಕೊಳ್ಳುವುದು ನಮ್ಮ ಕೈಯಲಿದೆ ಅದನ್ನು ಕಾಪಾಡಿಕೊಂಡು ಹೋಗಬೇಕಾದರೆ ನಿಯಮವನ್ನು ಪಾಲಿಸಲೆ ಬೇಕು, ನಿಯಮ ಪಾಲನೆಯಲ್ಲಿ ಅಲಕ್ಷ ತೋರಿದಲ್ಲಿ ಅನಾಹುತಗಳು ಗ್ಯಾರಂಟಿ ಈ ಅನಾಹುತಗಳನ್ನು ತಪ್ಪಿಸಬೇಕಾದರೆ ಸಂಚಾರ ನಿಯಮ ಪಾಲನೆ ಅತ್ಯಗತ್ಯ ಎಂದರು.
ಸಂಚಾರ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಮೌನೆಶ ರವರು ಕೈ ಮುಖಾಂತರ ಪ್ರದರ್ಶನ ಮಾಡಿ ವಿವರಣೆ ಮಾಡುತ್ತಾ ತೋರಿಸಿದರು. ಶ್ರೀ ಶ್ರೀನಿವಾಸ ರವರು ಪಿ.ಪಿ.ಟಿ ಮೂಲಕ ನಾವು ನಿಯಮವನ್ನು ಹೇಗೆ ಪಾಲಿಸಬೇಕೆಂದು, ಪಾಲಿಸದೆ ಇದ್ದಲಿ ಆಗುವ ಅಪಘಾತದ ಬಗ್ಗೆ ಭಾವಚಿತ್ರಗಳ ತುಣುಕುಗಳನ್ನು ತೋರಿಸಿ ವಿವರಿಸಿ ನಾವು ಮಾಡಬೇಕಾಗುವ ಪಾಲನೆ ಬಗ್ಗೆ ಹಾಗೂ ವರ್ಷದಲ್ಲಿ ಆಗುವ ಅನಾಹುತಗಳ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಕಾರ್ಯದರ್ಶಿ ಹೆಚ್. ಪರಮೇಶ್ವರ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ ರವರು ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯ ಕ್ರಮಕ್ಕೆ ಪೂರ್ವ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್‌ಗಳಾದ, ನವೀನ ಕುಮಾರ, ಶಿವಣ್ಣನವರ, ಪಶ್ಚಿಮ ಸಂಚಾರಿ ಠಾಣೆಯ ಪೋಲಿಸ್ ಸಬ್ ಇನ್ಸಪೆಕ್ಟರ್ ಗಳಾದ, ತಿರುಮಲೇಶ, ಶ್ರೀಮತಿ ಭಾರತಿ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.