ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ  ಮಹಾವಿದ್ಯಾಲಯದ ಆವರಣ, ಶಿವಮೊಗ್ಗ  ಇಲ್ಲಿ ೨ ದಿನಗಳ “ಜಾನುವಾರುಗಳ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ದಿನಾಂಕ ೧೧-೧೨ ಜನವರಿ  ೨೦೨೪ ರಂದು ಏರ್ಪಡಿಸಿದ್ದು,..

 ಇದರಲ್ಲಿ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳ ರೋಗ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಸಮೇತ  ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಯಿತು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೩೨ ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು.


ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್‌ರವರಾದ ಡಾ: ಕೆ.ಗಣೇಶ ಉಡುಪ ಇವರು  ಮಾತನಾಡುತ್ತಾ ಪಶುಚಿಕಿತ್ಸೆಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವುದಕ್ಕಾಗಿ ಮತ್ತು ತನ್ಮೂಲಕ   ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಕರೆಯಿತ್ತರು.
ಡಾ: ಸುನಿಲಚಂದ್ರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

ಡಾ: ಮಾಧವ ಪ್ರಸಾದ, ಡಾ: ಕವಿತಾ ರಾಣಿ, ಡಾ: ಶಂಬುಲಿAಗಪ್ಪ,  ಡಾ: ಪ್ರದೀಪ್, ಡಾ: ಮಂಜುನಾಥ್, ಡಾ: ಮಂಜು, ಡಾ: ಪ್ರಶಾಂತ್ ಬಾಗಲಕೋಟೆ, ಡಾ: ಪಟೇಲ್ ಸುರೇಶ್ ರೇವಣ್ಣ, ಡಾ: ರವೀಂದ್ರ, ಡಾ:ಅರುಣ್, ಡಾ:ಯೋಗೇಶ್, ಡಾ: ಸಂತೋಷ್ ಶಿಂಧೆ, ಡಾ: ಚೇತನ್ ಶರ್ಮ, ಡಾ: ಮಂಜುನಾಥ್, ಎಸ್.ಪಿ.  ಹಾಗೂ ಇತರ  ವಿಷಯ

ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ತಬುಸಮ್ ಬೇಗಂ, ತ್ಯಾಗರಾಜ್,ಚೇತನ್, ಸಂತೋಷ್, ಮಂಜುನಾಥ್ ಮತ್ತು ಡಾ:ಮೋಹನ್ ಮತ್ತು ಇತರ  ಸ್ನಾತಕೋತ್ತರ ವಿದ್ಯಾರ್ಥಿಗಳು ಸಹಕರಿಸಿದರು. 

By admin

ನಿಮ್ಮದೊಂದು ಉತ್ತರ

error: Content is protected !!