
ನವದೆಹಲಿ: ಅಡುಗೆ ಅನಿಲ (ಎಲ್ಪಿಜಿ) ದರವನ್ನು ಪ್ರತಿ ಸಿಲಿಂಡರ್ಗೆ 50ರೂ. ಹೆಚ್ಚಿಸಲಾಗಿದೆ. ಈ ತಿಂಗಳಿನಲ್ಲಿ ಎರಡನೇ ಬಾರಿ ಆಗಿರುವ ದರ ಏರಿಕೆ ಇದು.
ಇದರಿಂದ 14.2ಕೆ.ಜಿ ಸಿಲಿಂಡರ್ನ ದರ ₹ 644 ಇದ್ದಿದ್ದು ₹ 694ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಡಿಸೆಂಬರ್ 1ರಂದು ಪ್ರತಿ ಸಿಲಿಂಡರ್ ದರ 50ರೂ ಹೆಚ್ಚಿಳ ಆಗಿತ್ತು. 5 ಕೆ.ಜಿ.ಯ ಪ್ರತಿ ಸಿಲಿಂಡರ್ ದರ 18 ರೂ ಹಾಗೂ 19 ಕೆ.ಜಿ ಸಿಲಿಂಡರ್ ದರ 36.50ರೂ ಹೆಚ್ಚಾಗಿದೆ.