ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮುದಾಯದ ಆರೋಗ್ಯ ಅಧಿಕಾರಿಗಳು, ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು. ಕೆಲಸಕ್ಕಾಗಿ ಯಾವುದೋ ಜಿಲ್ಲೆಯಲ್ಲಿ ಇರುವವರಿಗೆ ಜೀವನದಲ್ಲಿ ಒಂದು ಸಾರಿ ಮಾತ್ರ ಜಿಲ್ಲೆಗೆ ವರ್ಗಾವಣೆ ಕೊಡಬೇಕು.
ಆರೋಗ್ಯ ಇಲಾಖೆಯ ಸಿಬ್ಬಂದಿ ಆದರೂ ಅವರಿಗೆ ಆರೋಗ್ಯ ವಿಮೆ, ಜೀವ ವಿಮೆ ಇಲ್ಲ. ಎರಡನ್ನೂ ಕೊಡಬೇಕು ಎಂದರು.
ರಾಷ್ಟ್ರೀಯ ಆರೋಗ್ಯ ಮಿಷನ್ ಸಿಬ್ಬಂದಿಗೆ ಸೌಲಭ್ಯ ಮತ್ತು ವೇತನ ನೀಡುವ ಸಲುವಾಗಿ ಶ್ರೀನಿವಾಸ ಆಚಾರಿ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೆಲ ಅಂಶಗಳನ್ನು ಶಿಫಾರಸು ಮಾಡಿತ್ತು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಕೆಲ ಅಂಶಗಳಿಗೆ ಮಾತ್ರ ಪುರಸ್ಕರಿಸಿದರು. ವೇತನ ಹೆಚ್ಚಳ ಮಾಡಿರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.ಸಕ್ಕರೆ ಕಾರ್ಖಾನೆ ಜಾಗದಲ್ಲಿ ಕಾರ್ಮಿಕ ಮುಖಂಡರು ಮನೆ ಒಡೆಸುವ ಪ್ರಶ್ನೆ ಉದ್ಭವ ಆಗಲ್ಲ ಎಂದು ಆಯನೂರು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳೂರು, ಚಿಕ್ಕಮಗಳೂರು,
ಶಿವಮೊಗ್ಗ ಜಿ ಕಾರ್ಮಿಕ ಅಕಾರಿಗಳು ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಪರಿಹಾರ ಕೊಟ್ಟಿzರೆ. ಪರಿಹಾರ ಪಡೆದವರು ಕಾರ್ಖಾನೆ ಸ್ವತ್ತು ಬಿಟ್ಟು ಕೊಡಬೇಕು. ೯೦೦ ಜನ ಪರಿಹಾರ ತಗೊಂಡಿzರೆ. ಒಪ್ಪಂದದ ಪ್ರಕಾರ ಇವರು ಆ ಜಾಗದಲ್ಲಿ ಇದ್ದರೆ ಬಿಟ್ಟು ಕೊಡಬೇಕು. ೫೦ ಜನ ಪರಿಹಾರ ಪಡೆದುಕೊಂಡಿಲ್ಲ ಎಂದರು.
ಸಕ್ಕರೆ ಕಾರ್ಖಾನೆ ಜಮೀನು ನಮಗೆ ಸಂಬಂಧ ಅಲ್ಲ. ೨೬ ವರ್ಷಗಳ ವೇತನ, ಪಿಂಚಣಿ, ಶೇ.೬ರ ಬಡ್ಡಿ ದರದಲ್ಲಿ ಕೊಡಿಸಿzವೆ. ನನ್ನ ಬಗ್ಗೆ ಮಾತನಾಡುವವರು ಇದನ್ನು ಮಾಡಿಲ್ಲ. ನಮ್ಮದು ಬುಡುಬುಡಿಕೆ ಸಮೂಹ ಅಲ್ಲ. ರಕ್ತ, ಬೆವರು ಕಾರ್ಮಿಕರು ಹರಿಸಿzರೆ. ಅವರಿಗೆ ನ್ಯಾಯ ಕೊಡಿಸಿzವೆ ಎಂದರು.
ಅಲ್ಲಿ ಈಶ್ವರಪ್ಪ, ರಾಘವೇಂದ್ರ ಯಾರೂ ಭಮಿ ಖರೀದಿ ಮಾಡಿಲ್ಲ. ಅದರಲ್ಲಿ ಸತ್ಯಾಂಶ ಇಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇಷ್ಟು ದಿನ ಇಲ್ಲದ ವಿಷಯ ಪ್ರಸ್ತಾಪ ಆಗುತ್ತಿರಬಹುದು. ಚುನಾವಣೆ ನಂತರ ಹೋರಾಟಗಾರರು ಕಾಣೆ ಆಗಬಹುದು. ನನ್ನ ಬಗ್ಗೆ ಮಾತನಾಡುವವರು ಸ್ವಲ್ಪ ಎಚ್ಚರದಿಂದ ಮಾತನಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಹಿರಣ್ಣಯ್ಯ, ಐಡಿಯಲ್ ಗೋಪಿ, ಶಿ.ಜು.ಪಾಷಾ, ಧೀರರಾಜ್ ಹೊನ್ನವಿಲೆ, ಜಿ. ಪದ್ಮನಾಭ್, ಜಗದೀಶ್ ಗೌಡರು, ಕೃಷ್ಣ, ತಿಮ್ಲಾಪುರ ಲೋಕೇಶ್, ಪಾಟೀಲ್, ಸಂತೋಷ್ ಆಯನೂರು ಇನ್ನಿತರರು ಇದ್ದರು.