ಶಿವಮೊಗ್ಗ, ಡಿಸೆಂಬರ್ 29:
: ಶಿವಮೊಗ್ಗ -ಭದ್ರಾವತಿ ಮಧ್ಯೆ ರೈಲ್ವೆ ಹಳಿಯ ಮೇಲೆ ರೈಲುಗಾಡಿಗೆ ಸಿಕ್ಕು ಅಪರಿಚಿತ ಗಂಡಸ್ಸು ಮೃತ ಪಟ್ಟಿದ್ದು ಮೃತನ ದೇಹವನ್ನು ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿರಿಸಲಾಗಿದೆ.
ಸುಮಾರು 40-45 ವಯಸ್ಸಿನ ಈತನ ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲ. 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಅಗಲವಾದ ಮುಖ ಹೊಂದಿದ್ದು, ಮೈಮೇಲೆ ಕ್ರೀಮ್ ಬಣ್ಣದ ತುಂಬು
ತೋಳಿನ ಶರ್ಟ್, ಕಂದು ಬಣ್ಣದ ಹಳದಿ ದಡಿಯುಳ್ಳ ಪಂಚೆ ಧರಿಸಿದ್ದು, ಕೈಯಲ್ಲಿ ನೀಲಿ ಬಣ್ಣದ ಕೇಸರಿ ಪಟ್ಟೆಯುಳ್ಳ ಚೀಲ ಇರುತ್ತದೆ.
ಈ ಅಪರಿಚಿತ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ
ರೈಲ್ವೇ ಪೊಲೀಸ್ ಠಾಣೆ ದೂ.ಸಂ.: 08182-222974 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.