ಶಿವಮೊಗ್ಗ: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ವಿರೋಧದ ಹೊರತಾಗಿಯೂ ಭಾರತೀಯ ಜನತಾ ಪಕ್ಷದ ವಿರುದ್ದ ಯಾವುದೆ ರಾಜಕೀಯ ಚಟುವಟಿಕೆ ಮಾಡುವುದನ್ನು ನಿಯಂತ್ರಿಸುವ ಕುತಂತ್ರದ ಭಾಗವಾಗಿ ಅಮಿತ್ ಷಾ ತಂಡದ ನಿರ್ದೇಶನದಂತೆ ಕೇಂದ್ರ ಸರ್ಕಾರ ಝಡ್‌ಪ್ಲಸ್ ಭದ್ರತೆ ಒದಗಿಸಲು ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಆರೋಪಿಸಿದ್ದಾರೆ.


ಯಡಿಯೂರಪ್ಪರವರು ಶಾಸಕರಾಗಿದ್ದ ಅವಧಿಯಿಂದ ಹಿಡಿದು ಮುಖ್ಯಮಂತ್ರಿಯಾಗಿ ಕೆಳಗೆ ಇಳಿಯುವವರೆಗೆ ಝಡ್‌ಪ್ಲಸ್ ಭದ್ರತೆ ಪಡೆಯುವ ಪರಿಸ್ಥಿತಿ ಬಂದಿರಲ್ಲಿಲ್ಲ. ಹಾವೇರಿಯಲ್ಲಿ ಪೋಲೀಸರಿಂದ ಗೋಲಿಬಾರ್ ನಡೆದು ರೈತರು ಸಾವು ಸಂಭವಿಸಿದಾಗ ಪ್ರಭಲವಾಗಿ ರೈತರ ಪ್ರತಿಭಟನೆ ಎದುರಿಸಬೇಕಾಯಿತು. ಆಗಲೂ ಭದ್ರತೆ ಪಡೆಯಲಿಲ್ಲ. ರಾಜ್ಯದ ರಾಜಕಾರಣದ ಮಟ್ಟಿಗೆ ಝಡ್ ಪ್ಲಸ್ ಭದ್ರತೆ ಪಡೆದವರು ಯಾರೂ ಇಲ್ಲ.


ಆದರೆ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ ಮೇಲೆ ತಮ್ಮ ಮಕ್ಕಳ ರಾಜಕೀಯ ಬೆಳವಣಿಗೆಯ ನೆಪಕ್ಕೆ ಮಾತ್ರ ರಾಜಕೀಯದಲ್ಲಿ ಇದ್ದಾರೆ. ಹೀಗಿರುವಾಗ ಇದ್ದಕ್ಕಿದ್ದಂತೆ ಯಡಿಯೂರಪ್ಪರಿಗೆ ಝಡ್‌ಪ್ಲಸ್ ಭದ್ರತೆ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರ ಹಿಂದೆ ತಂತ್ರಗಾರಿಕೆ ಇರುವುದು ತಿಳಿಯದ ರಹಸ್ಯವಲ್ಲವೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.


ಜನಸಾಮಾನ್ಯರ ನಡುವಿನಿಂದ ನಾಯಕರಾಗಿ ಬೆಳೆದು ಬಂದಿರುವ ಯಡಿಯೂರಪ್ಪ ಝಡ್‌ಪ್ಲಸ್ ಭದ್ರತೆಯನ್ನು ಹೇಗೆ ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಯಡಿಯೂರಪ್ಪರವರು ತಮಗೆ ಯಾವ ಭದ್ರತೆಯೂ ಬೇಡವೆಂದು ತಮ್ಮ ಅಭಿಪ್ರಾಯ ತಿಳಿಸಿದರೂ ಕೂಡ ಈ ಭದ್ರತೆ ನೀಡಿರುವುದು ಯಾವ ಉದ್ದೇಶಕ್ಕೆ ಎಂದು ವಕ್ತಾರ ವೈ.ಬಿ.ಚಂದ್ರಕಾಂತ್ ಹೇಳಿದ್ದಾರೆ

By admin

ನಿಮ್ಮದೊಂದು ಉತ್ತರ

You missed

error: Content is protected !!