ಶಿವಮೊಗ್ಗ: ಮೆಟ್ರೋ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್ ಆರಂಭಿಸುತ್ತಿದ್ದು, ಇದರ ಉದ್ಘಾಟನೆಯು ನ.೨ರ ಬೆಳಿಗ್ಗೆ ೧೦ಕ್ಕೆ ನಡೆಯಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ಸಿ ಪೃಥ್ವಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧುಮೇಹ ಇಂದು ಅನಿವಾರ್ಯದ ಕಾಯಿಲೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಆಸ್ಪತ್ರೆಯಲ್ಲಿ ಆಧುನಿಕ

ಚಿಕಿತ್ಸಾ ಸೌಲಭ್ಯಗಳಿವೆ. ಇದರ ಜೊತೆಗೆ ಯೋಗವೂ ಸೇರಿಕೊಂಡಿದೆ. ಮಧುಮೇಹದಿಂದ ಉಂಟಾಗುವ ಸಾಮಾನ್ಯ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ಸೆಂಟರ್

ತೆರೆಯಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೆಟ್ರೋ ಆಸ್ಪತ್ರೆ ಅಧ್ಯಕ್ಷ ಡಾ. ಪಿ. ಲಕ್ಷ್ಮೀನಾರಾಯಣ ಆಚಾರ್ ಉಪಸ್ಥಿತರಿದ್ದರು.