ಶಿವಮೊಗ್ಗ: ಸಾಲಬಾಧೆ ಹಿನ್ನೆಲಯಲ್ಲಿ ನಿವೃತ್ತ ಸರ್ಕಾರಿ ಚಾಲಕನೊಬ್ಬ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಶ್ರೀನಿವಾಸಲು ನಿನ್ನೆ ರಾತ್ರಿ ಮನೆಯಿಂದ ಆಟೋ ರಿಕ್ಷದಲ್ಲಿ ಬಂದು ಶೇಷಾದ್ರಿಪುರಂ ಬಳಿ ಜನಶತಾಬ್ದಿ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವರು.
ಶ್ರೀನಿವಾಸಲು ಅವರು ಅರಣ್ಯ ಇಲಾಖೆಯ ಜಾಗೃತದಳದ ಚಾಲಕರಾಗಿ ನಿವೃತ್ತಿ ಹೊಂದಿದವರು. ಶಿವಮೊಗ್ಗದ ವೆಂಕಟೇಶ್ವರ ನಗರದಲ್ಲಿ ಸ್ವಂತ ಮನೆಯಿ ದ್ದರೂ ಸಹ ವಿನೋಬ ನಗರದ ಎರಡನೇ ತಿರುವಿನಲ್ಲಿ ವಾಸವಾಗಿದ್ದರು.
ಇವರಿಗೆ 4 ಜನ ಮಕ್ಕಳಿದ್ದಾರೆ. ತೆಗೆದುಕೊಂಡ ಸಾಲ ಹೊರೆಯಾಗಿ ಪರಿಣಮಿಸಿದ್ದರಿಂದ ಮತ್ತು  ಮಕ್ಕಳು ಸರಿಯಾಗಿ ಕೆಲಸ ಮಾಡದ ಕಾರಣ ಸಾಲದ ಹಣ ಕಟ್ಟಲು ಕಷ್ಟವಾಗಿದೆ ಈ ಕೃತ್ಯ ಎಸಗಿಕೊಂಡಿದ್ದಾರೆ.
ನಿನ್ನೆ ರಾತ್ರಿ ಸುಮಾರು ೧೦ ಗಂಟೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ಜನಶತಾಬ್ದಿ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಕಾಲು ಮುರಿದಿದೆ. ತಕ್ಷಣವೇ ಮೆಗ್ಗಾನ್ ಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ . ಮಂಗಳೂರಿನಲ್ಲಿ ಸಾಗಿಸಲಾಗಿದೆ. 

By admin

ನಿಮ್ಮದೊಂದು ಉತ್ತರ

You missed

error: Content is protected !!