ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ರವೀಂದ್ರ ನಗರದ ದೇವಸ್ಥಾನದಲ್ಲಿ ಅ.೧೫ರಿಂದ ಅ.೨೯ರ ವರೆಗೆ ಶ್ರೀ ಶರನ್ನ ವರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೌಸಿಂಗ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಹೇಳಿದರು.
ಅವರು ಇಂದು ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಶೇಷ ಎಂದರೆ ಶ್ರೀ ಧನಲಕ್ಷ್ಮಿ ದೇವಿಯ ಅಲಂ ಕಾರವಾಗಿದೆ. ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿದೆ. ದುರ್ಗಾದೇವಿಯನ್ನು ಒಂದೊಂದು ದಿನ ಒಂಭತ್ತು ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ೧೦ನೆ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಕಳೆದ ೩೨ ವರ್ಷಗಳಿಂದ ಶರನ್ನವರಾತ್ರಿ ಆಚರಿಸುತ್ತಾ ಬಂದಿದ್ದೇವೆ ಎಂದರು
.
ಈ ಬಾರಿಯೂ ಕೂಡ ಅ.೧೫ರಂದು ಪ್ರಾರಂಭವಾಗಿ, ಅ.೨೮ರಂದು ಸಮಾರೋಪ ಗೊಳ್ಳುತ್ತದೆ. ಅ.೨೯ರಂದು ರಾಜಬೀದಿ ಉತ್ಸವವಿರುತ್ತದೆ. ಈ ಉತ್ಸವ ದಲ್ಲಿ ಧನಲಕ್ಷ್ಮಿ ದೇವಿಯ ಭವ್ಯ ಮೆರವಣಿಗೆ ನಡೆಯು ತ್ತದೆ. ಪ್ರತಿದಿನವೂ ವಿಶೇಷ ಹೋಮ, ಹವನ, ಯಾಗ ಗಳು ನಡೆಯುತ್ತವೆ. ಜೊತೆಗೆ ಪ್ರತಿದಿನ ಸಂಜೆ ೬ರಿಂದ ೬-೩೦ರವರೆಗೆ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿ ಗಳಿಂದ ಭರತನಾಟ್ಯವಿ ರುತ್ತದೆ. ಸಾಂಸ್ಕೃತಿಕ ಕಾರ್ಯ ಕ್ರಮದ ಉದ್ಘಾಟನೆ ಅ.೧೫ರಂದು ಸಂಜೆ ೬ ಗಂಟೆಗೆ ನಡೆಯಲಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಅ.೨೮ರಂದು ಶತಚಂಡಿಕಾ ಯಾಗ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.೧೫ರಿಂದ ಪ್ರತಿದಿನ ನಡೆಯುವ ಸಂಜೆಯ ಸಾಂಸ್ಕೃತಿ ಕಾರ್ಯಕ್ರಮ ದಲ್ಲಿ ಭಜನಾ ಗಾಯಕರು, ಸುದರ್ಶನ್ ಜಿ. ಯವರಿಂದ ಸತ್ಸಂಗ, ಲಕ್ಷ್ಮೀರಾಧಾಕೃಷ್ಣ ಅವರಿಂದ ದೇವರನಾಮ, ಗರ್ತಿಕೆರೆ ರಾಘಣ್ಣ ತಂಡದಿಂದ ಸುಗಮ ಸಂಗೀತ,
ಹರಿಕಥೆ, ರಾಮ ಸ್ಮರಣೆ, ವೀಣಾವಾದನ, ಕುಮಾರಸ್ವಾಮಿ ಮತ್ತು ವೃಂದದವರಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ, ಗಮಕವಾಚನ, ಭರತನಾಟ್ಯ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಅ.೨೮ರಂದು ಶತಚಂಡಿಕಾ ಯಾಗದಲ್ಲಿ ೧೫ಕ್ಕೂ ಹೆಚ್ಚು ಪುರೋಹಿತರು ಭಾಗವಹಿಸ ಲಿದ್ದು,
೧ಲಕ್ಷ ಜಪ ಮಾಡುತ್ತಾರೆ. ೧೦೦ ಸುವಾಸಿನಿಯರಿಗೆ ಬಾಗಿನ ನೀಡುತ್ತಾರೆ. ನಂತರ ಸಂಜೆ ೪-೩೦ಕ್ಕೆ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದ್ದು, ವಿಸರ್ಜಿಸಲಾಗುವುದು. ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಉಮಾಪತಿ, ಸ.ನಾ. ಮೂರ್ತಿ, ಶಬರೀಶ್ ಕಣ್ಣನ್ ಇದ್ದರು.