ಶಿವಮೊಗ್ಗ, ಅಕ್ಟೋಬರ್ ೦೫, ( : ೨೦೨೩-೨೪ ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಕೆಗಾಗಿ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ.


ಶೇ.೭೫ ರ? ಸಾಮಾನ್ಯ ವರ್ಗದ ರೈತರಿಗೆ ಹಾಗೂ ಶೇ.೯೦ ರ? ಪರಿಶಿ? ಜಾತಿ ಮತ್ತು ಪರಿಶೀ? ಪಂಗಡದ ರೈತರಿಗೆ ೨ ಹೆಕ್ಟೇರ್‌ವರೆಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ಸೌಲಭ್ಯವನ್ನು ಹಾಗೂ ೨ ಹೆಕ್ಟೇರ್ ಮೇಲ್ಪಟ್ಟ

ಹನಿ ನೀರಾವರಿ ಪ್ರದೇಶಕ್ಕೆ ಶೇ. ೪೫ ರಷ್ಟು ಸಹಾಯಧನ ನೀಡಲಾಗುವುದು. ಇಲಾಖೆಯಿಂದ ಅನುಮೋದನೆಗೊಂಡ ಕಂಪನಿಗಳ ಮೂಲಕವೇ ರೈತರು ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿಕೊಳ್ಳುವುದು.


ಆಸಕ್ತ ರೈತರು ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅ.೩೧ ರೊಳಗಾಗಿ ಶಿಕಾರಿಪುರ ಹಿರಿಯ

ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!