ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ಮತ್ತು ಬೆಂಗಳೂರಿನ ಆರ್‌ಡಿಸಿ ಫೌಂಡೇಷನ್ ಸಹಯೋಗದಲ್ಲಿ ನ. 28ರ ಬೆಳಗ್ಗೆ 10ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಲಿದ್ದು, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಮನ್ವಯದಿಂದ ಗೌರವ ಸಲ್ಲಿಸಲಾಗುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಅಧ್ಯಕ್ಷ ಡಾ. ಎಚ್.ವಿ.ಸುಬ್ರಹ್ಮಣ್ಯ, ಕೈಗಾರಿಕೋದ್ಯಮಿ ನಂಜುಂಡಶೆಟ್ಟಿ ಪಾಲ್ಗೊಳ್ಳುವರು.
ರವಿ ಚನ್ನಣ್ಣನವರ್ ಉಪನ್ಯಾಸ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರದಲ್ಲಿ ಭರವಸೆಯೇ ಬದುಕಿನ ಬೆಳಕು ವಿಷಯ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ನನ್ನ ದೌರ್ಬಲ್ಯಗಳೇ ನನ್ನ ಸಾಮಾರ್ಥ್ಯ ವಿಷಯ ಕುರಿತು ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ ಉಪನ್ಯಾಸ ನೀಡುವರು.
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳು-ತಯಾರಿ, ಪರೀಕ್ಷೆ ಪತ್ರಿಕೆ ಮಾದರಿ ಮತ್ತು ಹಂತಗಳು ವಿಷಯ ಕುರಿತು ಶಿಕ್ಷಣ ತಜ್ಞ ಸಂದೀಪ್ ಮಹಾಜನ್, ನೆನಪಿನ ಶಕ್ತಿಯ ಮಂತ್ರಗಳು ವಿಷಯ ಕುರಿತು ಡಾ. ಪ್ರೀತಿ ಪೈ, ಸಂವಹನ-ಸಾಧನೆಯ ಅಸ್ತ್ರ ವಿಷಯ ಕುರಿತು ಡಾ. ಕಾರ್ತಿಕ್ ಉಪನ್ಯಾಸ ನೀಡಲಿದ್ದಾರೆ.