ತೀರ್ಥಹಳ್ಳಿ: ಪಟ್ಟಣದ ಆಗುಂಬೆ ಮುಖ್ಯರಸ್ತೆಯಲ್ಲಿರುವ ಸತೀಶ್ ಕಾಮತ್ ಅವರ ಮಾಲಿಕತ್ವದ ಕಾಮತ್ ಬೇಕರಿಯಲ್ಲಿ ಫ್ರಿಜ್ ಬಸ್ಟ್ ಆಗಿ ಅವರ ಬೇಕರಿ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.
ಇಂದು ಬೆಳ್ಳಂಬೆಳಗ್ಗೆ ದುರ್ಘಟನೆ ಸಂಭವಿಸಿದ್ದು, ವಿದ್ಯುತ್ನಲ್ಲಿ ವ್ಯತ್ಯಯ ಉಂಟಾಗಿದ್ದು, ಫ್ರಿಜ್‌ನಿಂದ ಎಲ್ಲೆಡೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂಬುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ.
ಪಟ್ಟಣದಲ್ಲಿ ಇತ್ತೀಚೆಗೆ ಮಧ್ಯರಾತ್ರಿ ಮತ್ತು ಬೆಳಗಿನ ವೇಳೆಗೆ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್‌ನಲ್ಲಿ ಹೆಚ್ಚು ವೋಲ್ಟೇಜ್ ಲೋಪದೋಷ ಉಂಟಾಗುತ್ತಿರುವ ಬಗ್ಗೆ ಅನೇಕ ಗ್ರಾಹಕರು ಪಟ್ಟಣದ ಶಾಖೆ ಎಂಜಿನಿಯರ್ ಗಮನಕ್ಕೆ ತಂದರು ಸಹ ಯಾವುದೇ ಸಮಸ್ಯೆಗಳು ಇಲ್ಲ ಎಂಬುದಾಗಿ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ!? ಎಂಬುದಾಗಿ ಕೆಲವು ವಾಣಿಜ್ಯ ಬಳಕೆ ಗ್ರಾಹಕರು ದೂರುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ಗಮನ ಹರಿಸಿ ವಿದ್ಯುತ್‌ನಲ್ಲಿ ಯಾವುದಾದರೂ ತಾಂತ್ರಿಕ ದೋಷವಿದೆಯೇ ಎಂಬುದನ್ನು ಮನಗಂಡು ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು ಉತ್ತಮ ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ಕೂಡ ಮೆಸ್ಕಾಂ ಇಲಾಖೆಯ ವಿದ್ಯುತ್ ಸುರಕ್ಷತಾ ಎಚ್ಚರಿಕೆಯ ಮಾನದಂಡ ಕ್ರಮಗಳು ಅನುಸರಿಸಬೇಕು. ವಿದ್ಯುತ್ ಶಾರ್ಟ್ ಸರ್ಕಿಟ್ ತಡೆಯುವಂತೆ ಎಂ.ಸಿ.ಬಿ(ಮೈನ್ ಸರ್ಕಿಟ್ ಬ್ರೇಕರ್) ಅಳವಡಿಸಿ ಮತ್ತು ಫ್ಯೂಸ್ ಅಳವಡಿಸುವುದು ಉತ್ತವ ಪಟ್ಟಣದ ಶಾಖೆ ಅಧಿಕಾರಿಗಳು ಇಂತಹ ವಾಣಿಜ್ಯ ಗ್ರಾಹಕರು ಹೆಚ್ಚು ವಿದ್ಯುತ್ ಬಳಸುವಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆಯೆ!? ಎಂದು ಖುದ್ದು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣ ಶಾಖೆಯ ಇಂಜಿನಿಯರ್ ಸ್ಥಳಕ್ಕೆ ಪರಿಶೀಲನೆಗೆ ಹೋಗುವುದಿಲ್ಲ!? ಎಂಬುದರ ಬಗ್ಗೆ ಆರೋಪವು ಕೇಳಿ ಬರುತ್ತಿದ್ದು, ಇನ್ನಾದರೂ ಮೆಸ್ಕಾಂನ ಅಧಿಕಾರಿಗಳು ಗಮನಹರಿಸಬೇಕು, ಇಲ್ಲವಾದಲ್ಲಿ ಇಂಥ ದುರ್ಘಟನೆಗಳು ಪದೇಪದೆ ಸಂಭವಿಸುತ್ತದೆ. ಶಿವಮೊಗ್ಗ, ತೀರ್ಥಹಳ್ಳಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ತಕ್ಷಣದಲ್ಲಿ ಕ್ರಮ ಕೈಗೊಳ್ಳುವಂತೆ ಕೆಲವು ಗ್ರಾಹಕರು ಕೋರಿದ್ದಾರೆ.