
ಲಕ್ಷಾಂತರ ಮೌಲ್ಯದ ಸಾಮಾಗ್ರಿ ವಶ
ಶಿವಮೊಗ್ಗ : ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮೋಸಮಾಡಿ ತೆಗೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ನಾಗೇಶ್ (50) ಯುಟಿಪಿ ಕಾಲೋನಿ ಶಿವಮೊಗ್ಗ ಎಂಬಾತನನ್ನು ಬಂಧಿಸಿ, 4.15 ಲಕ್ಷ ರೂ ಮೌಲ್ಯದ 02 ಜೆರಾಕ್ಸ್ ಮಷಿನ್, 05 ಪ್ರಿಂಟರ್, 02 ಯುಪಿಎಸ್ ಹಾಗೂ 06 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜೀಸ್ ಮತ್ತು ವೆಂಕಟೇಶ ನಗರದ ಹೈಟೆಕ್ ಸೆಲ್ಯೂಷನ್ ಎಂಬ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ, ಕರ್ನಾಟಕ ನೀರಾವರಿ ನಿಗಮದ, ಸಹಾಯಕ ಕಾರ್ಯಪಾಲಕ ಕಛೇರಿ ಶಿಕಾರಿಪುರದ ಉದ್ಯೋಗಿ ನಾಗೇಶ್ ಎಂಬಾತನು ನಕಲಿ ದಾಖಲೆಗಳನ್ನು ನೀಡಿ, ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.
ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ
ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ ಶಿವಮೊಗ್ಗ ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ,
ಚಂದ್ರಶೇಖರ್, ಸಿಪಿಐ ಕೋಟೆ ರವರ ನೇತೃತ್ವದಲ್ಲಿ ರಾಹತ್ ಆಲಿ, ಪಿಎಸ್ಐ, ಜಯನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಜ್ಯೋತಿ, ಮಹೇಶ್.ಸಿ, ಮೋಹನ್ ಕುಮಾರ್ ಸಿಪಿಸಿ, ಚಂದನ್ ನಾಯ್ಕ್ ಸಿಪಿಸಿ, ಪ್ರಕಾಶ್ ಸಿಪಿಸಿ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿತ್ತು.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.