ಶಿವಮೊಗ್ಗ, ಸೆ.12:
ಇಂತಹದೊಂದು ಶೀರ್ಷಿಕೆಯನ್ನು ನೀಡಲು ಕಾರಣ ಸುಮಾರು ನಾಲ್ಕು ತಿಂಗಳಿನಿಂದ ಶಿವಮೊಗ್ಗ ನಗರದ ಹಲವೆಡೆ ಹೊರವಲಯದಲ್ಲಿ ಸುಖಾ ಸುಮ್ಮನೆ ತಿರುಗಾಡುವವರು, ಅಲ್ಲಿಗೆ ಕುಳಿತು ಎಣ್ಣೆ ಪಾರ್ಟಿ ಮಾಡುವವರು ಹಾಗೂ ಗಾಂಜಾ ಮಾರಾಟ ಹಾಗೂ ಸೇವನೆಯ ಗಿರಾಕಿಗಳಿಗೆ ನಿತ್ಯ ಶಿವಮೊಗ್ಗ ಜಿಲ್ಲೆಯ ಪೊಲೀಸರು ಕ್ರಮ ಕೈಗೊಳ್ಳುತ್ತಾ ಬಂದಿದ್ದಾರೆ.
ಶಿವಮೊಗ್ಗ ನಗರದ ಬಹುತೇಕ ಹೊಸ ಹೊಸ ಬಡಾವಣೆಗಳು ಸೇರಿದಂತೆ ಹೊರವಲಯದ ಜನ ದಟ್ಟಣೆ ಇಲ್ಲದ ಜಾಗದಲ್ಲಿ ಸಂಜೆಯಾದ ನಂತರ ಬಹಳಷ್ಟು ಯುವಕರು ಸೇರಿ ನಿತ್ಯದ ಕಾಯಕ ಎಂಬಂತೆ ಮಧ್ಯ ಸೇವನೆ, ಗಾಂಜಾ ಸೇವನೆ ಮಾಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದರು. ಇದರ ಜೊತೆಗೆ ಕೆಲವರು ಗಾಳಿ ಹವಾ ಪಡೆಯಲು ಸ್ನೇಹಿತರ ಜೊತೆ ಮಾತನಾಡಲು ಬಂದವರೂ ಇದ್ದಾರೆ. ಅವರನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಡ್ಡಗಟ್ಟಿ ನಿಲ್ಲಿಸಿ ವಿಚಾರಿಸಿ ತಪ್ಪು ಕಂಡು ಬಂದಾಗ ದೂರು ದಾಖಲಿಸುತ್ತಲೇ ಬಂದಿದ್ದಾರೆ.
ಎಷ್ಟೇ ದೂರು ಹಾಕಿದರೂ ಇನ್ನು ಕೂಡಗಳ ಈ ಪುಡಾರಿಗಳ ಹಾವಳಿ ಕಡಿಮೆಯಾಗದಿರುವುದು ದುರಂತವೇ ಹೌದು.
ನಿರಂತರವೆಂಬಂತೆ ನಿನ್ನೆ ಶಿವಮೊಗ್ಗ ನಗರ, ಸೇರಿದಂತೆ ತೀರ್ಥಹಳ್ಳಿ, ಭದ್ರಾವತಿ, ಹೊಳೆಹೊನ್ನೂರು ಭಾಗದಲ್ಲಿ ಹಲವರ ಮೇಲೆ ದೂರು ದಾಖಲಾಗಿದೆ.
ಇಂತಹ ಪೊಲೀಸ್ ದಾಳಿ ನಿರಂತರವಾಗಿ ನಡೆಯುತ್ತಲೇ ಇವೆ. ಇದರ ಜೊತೆಗೆ ಗಾಂಜಾ ಸೇವನೆಯ ಪ್ರಕರಣಗಳು ಸಹ ಪತ್ತೆಯಾಗುತ್ತಿವೆ.
ನಿನ್ನೆಯ ಮಾಹಿತಿ:
ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ, ಬಿ ಹೆಚ್ ರಸ್ತೆ, ಕಾನ್ವೆಂಟ್ ಸರ್ಕಲ್, ಡಿವಿಎಸ್ ಸರ್ಕಲ್, ಅಣ್ಣಾ ನಗರ, ಮಂಜುನಾಥ್ ಬಡಾವಣೆ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಬೊಮ್ಮನಕಟ್ಟೆ, ಭದ್ರಾ ಕಾಲೋನಿ, ಹುತ್ತಾಕಾಲೋನಿ, ಹೊಳೆಹೊನ್ನೂರಿನ ಹಕ್ಕಿ ಪಿಕ್ಕಿ ಕ್ಯಾಂಪ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ರಿಪ್ಪನ್ ಪೇಟೆಯ ಕೆಂಚನಾಳ ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನೆಹರು ನಗರ, ಹೆಗ್ಗೋಡು ಯಲಗಳಲೆ, ಶೆಡ್ತಿಕೆರೆ, ಕಾರ್ಗಲ್ ನ ಮಸೀದಿ ಸರ್ಕಲ್ ಮತ್ತು ಆನಂದಪುರದ ದಾಸಕೊಪ್ಪ ಸರ್ಕಲ್ ನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 34 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು IMV ಕಾಯ್ದೆ ಅಡಿಯಲ್ಲಿ 5 ಪ್ರಕರಣಗಳನ್ನು ದಾಖಲಿಸಿರುತ್ತದೆ.