ಇಂದು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಪ್ರತಿ ವರ್ಷ ಶಿಕ್ಷಕರದಿನಾಚಾರಣೆ ಯನ್ನು ಸೆಪ್ಟೆಂಬರ್5 ರಂದು ಅಚರಿಸಲಾಗುತ್ತದೆ
ಪ್ರಸಿದ್ಧ ವಿದ್ವಾಂಸ ಭಾರತ ರತ್ನ ಪುರಸ್ಕೃತ ಮೊದಲ ಉಪರಾಷ್ಟಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟಪತಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ
ಡಾ ರಾಧಾಕೃಷ್ಣನ್ ಅವರು ಸೆ 5 1888 ರಂದು ತಮಿಳುನಾಡಿನ ತಿರುತ್ತಣಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏನಾನ್ನಾದರೂಬ ಸಾಧನೆ ಮಾಡಬೇಕು ಎಂದರೆ ಅವರ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು
ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ
ಉತ್ತಮ ಶಿಕ್ಷಣ ನೀಡುವುದದ ಜೊತೆಗೆ ಶಿಕ್ಷಣದ ಮೂಲಾರ್ಥವನ್ನು ತಿಳಿಸಿ
ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ.
ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯ ವೋ ಹಾಗೇ ಅ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ
ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ ಭರವಸೆಯನ್ನು ಹೆಚ್ಚಿಸುವ ಕನಸನ್ನು ಸಾಕಾರಗೊಳಿಸುವ ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರೆ ತಪ್ಪಾಗಲಾರದು ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ ಅದುವೇ ಸೆ 5 ಈ ದಿನವನ್ನು ಶಿಕ್ಷಕರ ದಿನಾಚರಣೆ ಎಂದೇ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ
ನನ್ನ ಹುಟ್ಟು ಹಬ್ಬ ಆಚರಿಸುವ ಬದಲು ಸೆ5 ಶಿಕ್ಷಕರ ದಿನಾವನ್ನಾಗಿ ಆಚರಿಸಿದರೆ ಅದು ನನಗೆ ಹೆಮ್ಮೆ ಎಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಮ್ಮ ಶಿಷ್ಯ ಬಳಗಕ್ಕೆ ಹೇಳಿದರು ಅದ್ದರಿಂದ ಅವರ ಜನ್ಮ ದಿನವನ್ನು
1962 ರಿಂದ ಶಿಕ್ಷಕರ ದಿನಾವನ್ನಾಗಿ ಆಚರಿಸಲಾಗುತ್ತದೆ ಡಾ ರಾಧಾಕೃಷ್ಣನ್ ನವರ ಜನ್ಮದಿನಾಚರಣೆಯನ್ನು ಶಿಕ್ಷಕರದಿನಾವನ್ನಾಗಿ ಆಚರಿಸುವ ಪ್ರಮುಖ ಉದ್ದೇಶವೇ ಶಿಕ್ಷಕರ ಮಹತ್ವವನ್ನು ಸಾರುವುದು ಜೊತೆಗೆ ಶಿಕ್ಷಣದ ಲ್ಲಿ ಯುವ ಜನತೆಗೆ ಪೋತ್ಸಾಯಿಸುವುದು
ಬಿಎಂ ರಘು
ರಾಜ್ಯ ಪ್ರಶಸ್ತಿ ಪುರಸ್ಕೃತರು
ಶಿವಮೊಗ್ಗ