ರಿಪ್ಪನ್‌ಪೇಟೆ, ಆ.೨೮:ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲಿ ಒಬ್ಬರು. ರಾಜ್ಯದ ಎಲ್ಲಡೆ ಬಿಜೆಪಿ ಸಂಘಟನೆಗೆ ಬಲ ತುಂಬಿದ ಅವರು ಯಾವುದೇ ಕಾರಣಕ್ಕೂ ಕನಸಿನಲ್ಲಿಯೂ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾಡುವುದಿಲ್ಲ’ ಎಂಬ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಚಂದ್ರಯಾನ -೩ ಯಶಸ್ವಿ ಉಡಾವಣೆಯ ಹಿಂದೆ ದೇಶದ ಹೆಮ್ಮೆಯ ಇಸ್ರೊ ವಿಜ್ಞಾನಿಗಳ ಪರಿಶ್ರಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಸೇವೆ ಅಡಗಿದೆ. ಈ ಹಿಂದೆ ಚಂದ್ರಯಾನ – ೨ ತಾಂತ್ರಿಕ ದೋಷದಿಂದ ವಿಫಲವಾದಾಗ ಪ್ರಧಾನಿ ಬೆಂಗಳೂರಿಗೆ ಆಗಮಿಸಿ ವಿಜ್ಞಾನಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಪ್ರಯತ್ನಶೀಲತೆಯನ್ನು ಹುರಿದುಂಬಿಸಿದ್ದರು’ ಎಂದು ಹೇಳಿದರು.


ಜನರ ಆಶೋತ್ತರಕ್ಕೆ ಸ್ಪಂದಿಸಿದ ತೃಪ್ತಿಯಿದೆ ’ಮಲೆನಾಡು ಭಾಗದ ಜನರ ಬಹು ವರ್ಷದ ಬೇಡಿಕೆ ಅರಸಾಳು ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಬೇಡಿಕೆ ಈಡೇರಿಸಿದ ಸಂತೃಪ್ತಿ ಇದೆ’ ಎಂದು ಸಂಸದರು ಹೇಳಿದರು.


ಕೇಂದ್ರದ ರೈಲ್ವೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ ಪೂರಕ ಅನುದಾನ ತರುವಲ್ಲಿ

ಬಿ.ಎಸ್. ಯಡಿಯೂರಪ್ಪ, ಶಾಸಕ ಆರಗ ಜ್ಞಾನೇಂದ್ರ, ಹಾಲಪ್ಪ ಎಚ್. ಹರತಾಳು ಅವರ ಪರಿಶ್ರಮ ಅಡಗಿದೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಬೆಳಗೋಡು, ಸ್ಥಳೀಯ ಜನಪ್ರತಿ ನಿಧಿಗಳು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!