ಶಿವಮೊಗ್ಗ, ಆ.೨೮:
ಮುಂಬರುವ ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಮತದಾರ ಚೇತನ ಮಹಾಭಿಯಾನ ಹಮ್ಮಿಕೊಂಡಿದ್ದು, ಅದರ ಸಿದ್ಧತೆಗಳು ಈಗಾಗಲೇ ನಡೆದಿವೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.


ಅವರು ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಜೊತೆಗೆ ಹೊಸ ಮತದಾರರ ಸೇರ್ಪಡೆ ಯನ್ನು ಈ ಅಭಿಯಾನದ ಮೂಲಕ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆ, ವಿಧಾನಸಭೆ ಮತ್ತು ಶಕ್ತಿ ಕೇಂದ್ರಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ವಿಧಾನಸಭಾ ಮಟ್ಟದಲ್ಲಿ ಬಿಎಲ್‌ಎ-೧, ಬಿಎಲ್‌ಎ-೨ ನೇಮಕವಾಗಿದೆ. ಶಕ್ತಿ ಕೇಂದ್ರ ಮಟ್ಟದಲ್ಲಿ ಕಾರ್ಯಾಗಾರಗಳು ನಡೆದಿವೆ ಎಂದರು.


ಪಕ್ಷದ ಕಾರ್ಯಕರ್ತರ ಮನೆನೆಗೆ ತೆರಳಿ ಅಭಿಯಾನದ ಬಗ್ಗೆ ಪ್ರಚಾರ ಮಾಡುವರು.ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವರು. ಹೊಸ ಮತದಾರರ ಸೇರ್ಪಡೆ ಜೊತೆಗೆ ನಕಲಿ ಮತದಾರರನ್ನು ತೆಗೆಯುವುದು, ವರ್ಗಾವಣೆ ಪ್ರಕ್ರಿಯೆ ಈ ಎಲ್ಲಾ ಪ್ರಕ್ರಿಯೆಗಳನ್ನು ಪಕ್ಷದ ಮುಖಂಡರು,

ಕಾರ್ಯಕರ್ತರು ಪರಿಣಾಮಕಾರಿಯಾಗಿ ಮಾಡಲಿದ್ದಾರೆ. ಮತದಾರರ ನಿರ್ಲಕ್ಷ್ಯ ಸರಿಯಲ್ಲ. ಮತದಾನ ಒಂದು ಬಹುದೊಡ್ಡ ಶಕ್ತಿಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮತದಾರ ಚೇತನ ಮಹಾಭಿಯಾನ ಹಮ್ಮಿಕೊಂಡಿದೆ ಎಂದರು.
ಕುಮಾ ಬಂಗಾರಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ

. ಇದೆಲ್ಲ ಕಾಂಗ್ರೆಸ್ ಮುಖಂಡರ ಹುನ್ನಾರವಾಗಿದೆ. ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಆಡಳಿತ ಸೂತ್ರವೇ ದಾರಿತಪ್ಪಿದೆ. ಗ್ಯಾರಂಟಿಗಳನ್ನು ನೀಡಲಿ. ಬೇಡ ಎನ್ನುವುದಿಲ್ಲ. ಆದರೆ ಅದರ ಜೊತೆಗೆ ಬಡವರು ಸಂಕಷ್ಟದಲ್ಲಿದ್ದಾರೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇವುಗಳಿಗೆ ಕೂಡ ಆದ್ಯತೆ ನೀಡಬೇಕು. ತಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ಸಿಗೆ ಬರುತ್ತಾರೆ ಎಂದು ಹೇಳಬಾರದು ಇದೆಲ್ಲ ಸುಳ್ಳು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಾಜ್, ಶಿವರಾಜ್, ಬಿ.ಕೆ. ಶ್ರೀನಾಥ್, ಜ್ಞಾನೇಶ್ವರ್, ಹೃಷಿಕೇಶ್ ಪೈ, ವೀರಭದ್ರಪ್ಪ ಪೂಜಾರಿ, ಚಂದ್ರಶೇಖರ್, ಮಾಲತೇಶ್, ಅಣ್ಣಪ್ಪ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!