ಶಿವಮೊಗ್ಗ: ಗೋ ಶಾಲೆ ಸುಮಾರು 6 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದು, ಆರಂಭದಲ್ಲಿ ಭಾರತೀಯ ಮೂಲದ ಕೆಲವು ತಳಿಯ ಗೋವುಗಳು ಮಾತ್ರ ಇವೆ.
ಮುಂದಿನ ದಿನಗಳಲ್ಲಿ ‌ಭಾರತೀಯ ಮೂಲದ ಸುಮಾರು 52 ವಿವಿಧ ತಳಿಯ ಗೋವುಗಳನ್ನು ಈ ಗೋಶಾಲೆ ತರಲು ನಿರ್ಧರಿಸಲಾಗಿದೆ ಎಂದು ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಹೇಳಿದರು.
ಶಿವಮೊಗ್ಗದ ರಾಮಿನಕೊಪ್ಪ ಬಳಿ ನೂತನವಾಗಿ ನಿರ್ಮಿಸಿರುವ ಭಾರತೀಶಂಕರ ಗೋ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಮಲಾಪುರದ ಕಾವ್ಯ ಕಾವನ ಆಶ್ರಮ ಶ್ರೀ ಕ್ಷೇತ್ರ ಹಾಗೂ ಆರಾಧನ ಸೇವಾ ಟ್ರಸ್ಟ್ ಬೆಂಗಳೂರು ಇವರ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ 100 ಕೋಟಿ ವೆಚ್ಚದಲ್ಲಿ ದೇವಸ್ಥಾನವನ್ನ ನಿರ್ಮಿಸುವುದಾಗಿ ತಿಳಿಸಿದರು.
ಪ್ರತ್ಯಂಗೀರ ದೇವಿಯ ದೇವಸ್ಥಾನ ಹಾಗೂ ಸ್ವರ್ಣಗರ್ಭ ಮಹಾಗಣಪತಿ ದೇವಸ್ಥಾನವನ್ನ ನಿರ್ಮಿಸಲಾಗುತ್ತಿದೆ. ಸ್ವರ್ಣ ಗರ್ಭ ಮಹಾಗಣಪತಿ ದೇವಸ್ಥಾನವನ್ನ 30 ಅಡಿ ಭೂಮಿಯ ಆಳದಲ್ಲಿ ನಿರ್ಮಿಸಲಾಗುತ್ತಿದೆ. ಜನವರಿ ತಿಂಗಳಿಂದ ದೇವಸ್ಥಾನದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ನಾಗಲ್ಯಾಂಡ್ ನ ಬಿಜೆಪಿ ಮುಖಂಡ ನರೇಶ್ ಶರ್ಮಾ ಮಾತನಾಡಿ, ನಶಿಸಿ ಹೋಗುತ್ತಿರುವ ವಿವಿಧ ಭಾರತೀಯ ತಳಿಯ ಗೋವುಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಸಧ್ಯಕ್ಕೆ 7 ಹಸುಗಳು ಈ ಗೋಶಾಲೆಗಳಲ್ಲಿದ್ದು, ಮುಂದಿನ ದಿನಗಳಲ್ಲಿ ಇದೊಂದು ದಿವ್ಯಸ್ಥಾನಗಳಾಗಲಿವೆ ಎಂದು ಹೇಳಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!