ಶಿವಮೊಗ್ಗ,,ನ.11:
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನ ಗುಡಿಯ ದ್ವಜದ ಕಂಬದ ಹತ್ತಿರ, ನ.9ರಂದು ಮಂಜುನಾಥ ಭಂಡಾರಿ (32) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಭವಿತ್ @ ಆಕಾಶ್ (23) ವಾಸ ರೈಲ್ವೇ ಕ್ವಾಟ್ರಸ್ ಶಿವಮೊಗ್ಗ ಹಾಗೂ ಅಪ್ರಾಪ್ತ ಬಾಲಕ ಇವರಿಬ್ಬರು ಸೇರಿ ಕೊಲೆ ಮಾಡಿರುತ್ತಾರೆಂದು ಪಿರ್ಯಾದುದಾರರು ದೂರು ನೀಡಿದ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಮೃತ ವ್ಯಕ್ತಿ ಮಂಜುನಾಥ ಬಂಡಾರಿಯು ರೌಡಿ ಆಸಾಮಿಯಾಗಿದ್ದು, ಈತನು ಆರೋಪಿಗಳಿಗೆ ಹಣವನ್ನು ಕೊಡುವಂತೆ ಕಿರುಕುಳ ನೀಡಿ ಹಾಗೂ ಹಳೆಯ ದ್ವೇಶದ ಹಿನ್ನೆಲೆಯಲ್ಲಿ ಆರೋಪಿಗಳು ಮಂಜುನಾಥ ಬಂಡಾರಿಯನ್ನು ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು ರವರು ತಿಳಿಸಿದ್ದಾರೆ.
ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ ಅವರ ಮಾರ್ಗದರ್ಶನದಲ್ಲಿ, ಚಂದ್ರಶೇಖರ್, ಟಿ.ಕೆ, ಪೊಲೀಸ್ ನಿರೀಕ್ಷಕರು, ಕೋಟೆ ವೃತ್ತ ನೇತೃತ್ವದಲ್ಲಿ ರಾಹತ್ ಆಲಿ, ಪಿಎಸ್ಐ, ಜಯನಗರ ಪೊಲೀಸ್ ಠಾಣೆ
ಕೋಮಲ, ಮಪಿಎಸ್ಐ ಹಾಗೂ ಪ್ರೊಬೇಷನರಿ ಪಿಎಸ್ಐ ಗಳಾದ ಸಂತೋಷ್ ಭಾಗೋಜಿ ಮತ್ತು ಶಿಲ್ಪ, ಸೋಮು ಕೆ, ಎಎಸ್ಐ ಹಾಗೂ ಸಿಬ್ಬಂದಿಗಳಾದ ಸುಧಾಕರ್, ಸಿಹೆಚ್.ಸಿ, ಮೋಹನ್, ಸಿಹೆಚ್.ಸಿ, ಪರಮೇಶ್ ನಾಯ್ಕ್, ಸಿಹೆಚ್.ಸಿ, ರಾಮಕೃಷ್ಣ, ಸಿಪಿಸಿ, ಪ್ರಕಾಶ್, ಸಿಪಿಸಿ, ಆದರ್ಶ ಸಿಪಿಸಿ, ಶಿವರಾಜ್ ನಾಯ್ಕ್, ಸಿಪಿಸಿ, ಚಂದನ್, ಸಿಪಿಸಿ, ಮೋಹನ್ ಸಿಪಿಸಿ, ರವಿನಾಯ್ಕ್, ಸಿಪಿಸಿ, ಮುಸ್ತಫಾ ಎಹೆಚ್.ಸಿ ಮತ್ತು ಮಂಜುನಾಥ್ ಎಹೆಚ್.ಸಿ ರವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ನ.11 ರಂದು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ಕೃತ್ಯಕ್ಕೆ ಸಂಬಂಧಿಸಿದಂತೆ ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತದೆ.