ಶಿವಮೊಗ್ಗ, ಆ.26
ಹೊಳೆಹೊನ್ನೂರಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಪ್ರತಿಮೆಯನ್ನು ನಾಶ ಮಾಡಿದವರು ದುಷ್ಟರು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಸದ್ಭಾವನಾ ಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ಈ ಘಟನೆ ಖಂಡಿಸಿ ಬಿಜೆಪಿ ಯುವಮೋರ್ಚಾ ಶಿವಮೊಗ್ಗದ ಗಾಂಧಿ ಪಾರ್ಕಿನಿಂದ ಹೊಳೆಹೊನ್ನೂರು ವರೆಗೆ ಪಾದಯಾತ್ರೆ ಮಾಡಿದೆ. ಗಾಂಧೀಜಿ ಯವರ ಆದರ್ಶಗಳು ಅನುಕರಣೀಯ

. ೧೯೨೭ರಲ್ಲಿ ಶಿವಮೊಗ್ಗಕ್ಕೆ ಗಾಂಧೀಜಿಯವರು ಬಂದಿದ್ದರು ಎಂಬುದೇ ಒಂದುಹೆಮ್ಮೆ. ಶಿಕಾರಿಪುರದ ಈಸೂರಿನ ಹೋರಾಟಕ್ಕೂ ಅವರು ಶಕ್ತಿಯಾಗಿದ್ದರು. ಇಂತಹ ವ್ಯಕ್ತಿಯ ಪ್ರತಿಮೆಯನ್ನು ಒಡೆದಿರುವುದು ಖಂಡ ನೀಯ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಚಂದ್ರಯಾನ ಯಶಸ್ವಿಯಾಗಿದೆ. ಭಾರತದ ಪ್ರಧಾನ ಮಂತ್ರಿ ಮೋದಿಯವರು ತಮ್ಮ ಎಲ್ಲಾ ಕೆಲಸಗಳ ಒತ್ತಡದ ನಡುವೆಯೂ ಬೆಂಗಳೂರಿಗೆ ಬಂದು ವಿಜ್ಞಾನಿಗಳಿಗೆ ಪ್ರಶಂಸೆ ಮಾಡಿದ್ದಾರೆ. ಈ ಹಿಂದೆಯೂ ಕೂಡ ಅವರು ಚಂದ್ರಯಾನ ೨ ಫೇಲ್ಯೂರ್ ಆದಾಗ ವಿಜ್ಞಾನಿಗಳಲ್ಲಿ ಶಕ್ತಿಯನ್ನು, ಭರವಸೆಯನ್ನು
ತುಂಬಿದ್ದರು. ಅದರ ಪ್ರತಿಫಲವೇ ಈಗ ಗೆದ್ದಿದೆ.

ಉಪಗ್ರಹ ಹಾರಿದ ಜಾಗಕ್ಕೆ ಶಿವಶಕ್ತಿ ಎಂಬ ಹೆಸರನ್ನೂ ಪ್ರಧಾನಿ ಘೋಷಿಸಿದ್ದಾರೆ. ಹಾಗೆಯೇ ಆ ದಿನವನ್ನು ಕೂಡ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ ಎಂದರು.