ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ತುಂಬು ಸನಿಹದಲ್ಲಿದೆ.
ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದ ತುಂಗಾ ಜಲಾಶಯ ತುಂಬಲು ಕೇವಲ ಡ್ಯಾಂ ಭರ್ತಿಗೆ ಕೇವಲ ಒಂದೂವರೆ ಅಡಿ ಬಾಕಿ ಇದೆ.
ಇಂದು ಲಭಿಸಿದ ಮಾಹಿತಿಯನುಸಾರ 588.24 ಮೀಟರ್ ನ ಗರಿಷ್ಡ ಅಳತೆಯ ತುಂಗೆಯ ಅಂಗಳದಲ್ಲಿ ಇಂದಿನ ನೀರಿನ ಮಟ್ಟ 587.54 ಮೀಟರ್ ನಷ್ಟಾಗಿದೆ. ರಾತ್ರಿ ಸಹ ದಾರಾಕಾರ ಮಳೆಯಾಗಿದ್ದು .6 ರಷ್ಟು ಹೆಚ್ಚಿದೆ. ತುಂಗೆ ತುಂಬುವ ಸನಿಹದಲ್ಲಿದ್ದಾಳೆ.
ಈ ಬಾರಿ ಅವಧಿಗೂ ಮುನ್ನವೇ ತುಂಗಾ ಜಲಾಶಯ ಭರ್ತಿಯಾಗುತ್ತಿರುವುದು ಎಲ್ಲರ ಮೊಗದಲ್ಲಿ ಸಂತಸ ಉಂಟು ಮಾಡಿದೆ.
ಸರಾಸರಿ ಅಡಿಯ ಲೆಕ್ಕಾಚಾರದಲ್ಲಿ ಅವಲೋಕಿಸಿದಾಗ13.7 ಅಡಿಯ ತುಂಗಾ ಜಲಾಶಯದಲ್ಲಿ ನಿನ್ನೆ 11.6 ಅಡಿ ನೀರಿತ್ತು. ಇಲಾಖೆ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತುಂಬುವ ಸಮಯದಲ್ಲಿ ಮಾಹಿತಿ ನೀಡಿ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಪ್ರಮಾಣ: ಶಿವಮೊಗ್ಗ ತಾಲ್ಲೂಕಿನಲ್ಲಿ 5.2 ಮಿ.ಮೀ, ಭದ್ರಾವತಿ 6.4 ಮಿ.ಮೀ, ತೀರ್ಥಹಳ್ಳಿ 20.2ಮಿ.ಮೀ, ಸಾಗರ 13.4 ಮಿ.ಮೀ, ಸೊರಬ 7.4ಮಿ.ಮೀ, ಶಿಕಾರಿಪುರ 4.0ಮಿ.ಮೀ, ಹೊಸನಗರ 29.6ಮಿ.ಮೀ ತಾಲ್ಲೂಕುಗಳಲ್ಲಿ ಮಳೆಯಾಗಿದ್ದು , ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಕಂಡುಬರುತ್ತಿದೆ.
ಜಿಲ್ಲಾಡಳಿತ ಸಿದ್ದ: ಈಗಿನ ಜೂನ್ ಹಾಗೂ ಜುಲೈ ತಿಂಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಅದರಿಂದ ಉಂಟಾಗಬಹುದಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದಿನ ಜಲಾಶಯ ವಿವರ
*:TUNGA DAM GAUGE:* Date:14.06.2020
Dam level : 587.54 mtr
Storage Capacity:
Gross : 2.848 TMC
Live : 2.019 TMC
Inflow : 1596 cuseca
Total Outflow 1214 Cusecs
a) River : 1179
b) UTP canal : Nil
c) LBC: nil
d) RBC: nil e) water supply : 35
Last year Level: 583.37 Mtr
Storage Capacity:
Gross : 1.134 TMC
Live : 0.305 TMC
Inflow : Nil Total outflow : 35 Cusecs