ಬೆಂಗಳೂರು: ಕರ್ನಾಟಕದಲ್ಲಿ ಇಂದು 308 ಪ್ರಕರಣ ಪತ್ತೆಯಾಗಿದೆ. ಇನ್ನು 3 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 6,824 ಪ್ರಕರಣಗಳ ಪೈಕಿ 3,648 ಮಂದಿ ಗುಣಮುಖರಾಗಿದ್ದಾರೆ. ಇನ್ನು 3,092 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ನಾರ್ಮಲ್ : ಕೊರೊನಾ ಕುರಿತು ಮಾಹಿತಿಯು ಈಗಷ್ಟೆ ಹೊರಬಂದಿದೆ. ಶಿವಮೊಗ್ಗದ ಪಾಲಿಗೆ ದುರಂತದ ದಿನಗಳು ಕೆಡಿಮೆಯಾಗುವ ಎಲ್ಲಾ ಲಕ್ಷಣಗಳಿವೆ. ಮೊನ್ನೆಯಿಂದ ಎರಡೇ ದಿನದಲ್ಲಿ ಹದಿನಾರು ಪ್ರಕರಣ ನೋಡಿದ್ದ ನಾವು ಇಂದು ಮತ್ತೆ ಡೊಂಟ್ ವರಿ ಪದ ಬಳಸಬೇಕಿದೆ. ಮೂವರು ಪೊಲೀಸರು ಹಾಗೂ ಚಿಕಿತ್ಸೆ ನೀಡುತ್ತಿದ್ದ ವೈದ್ಯ ವಿದ್ಯಾರ್ಥಿ ಸೇರಿದಂತೆ ಆರು ಜನಕ್ಕೆನಿನ್ನೆ ಪಾಸೀಟೀವ್ ಬಂದಿದೆ. ಈಗ ಅಂದಿನ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಸೊಂಕಿತರ ಸಂಖ್ಯೆ ಶತಕ ಸಮೀಪಿಸುತ್ತಿದೆ. ಜಿಲ್ಲೆಯಲ್ಲಿ ಒಂಬತ್ತು ಕ್ವಾರಂಟೈನ್ ಜೋನ್ ಗಳನ್ನ ಮಾಡಲಾಗಿದೆ. ಇಂತಹ ಕೆಲವೆಡೆ ಚಿಕ್ಕ ಗಲಾಟೆಗಳಾಗಿವೆ. ಎಲ್ಲೆಡೆ ಅತಿ ಹೆಚ್ಚು ಪರಿಶೀಲನೆ ನಡೆಯತ್ತಿದೆ. ಸೊಂಕಿತರ ಹುಡುಕಾಟಕ್ಕೆ ವೈಯುಕ್ತಿಕ ಕಾಳಜಿಯೂ ಇರಲಿ. ಅನುಮಾನ ಎನಿಸಿದಾಕ್ಷಣ ಆಸ್ಪತ್ರೆಗೆ ಹೋಗುವುದು ಅತ್ಯಗತ್ಯ. ಎಚ್ಚರದ ಹೆಜ್ಜೆಯಷ್ಟೆ ನಮ್ಮದಾಗಿರಲಿ.
ಹುಷಾರ್
ಬೀದಿಯಲ್ಲೇ ತಿಂಡಿ ಊಟ, ಪಾನಿಪುರಿ, ಗೋಬಿ,…. ಎಲ್ಲವೂ ಸಿಗುತ್ತಿದೆ. ಅದು ನಿಮ್ಮದಲ್ಲ. ಎಚ್ಚರ ನಿಮ್ಮದು. ನಮ್ಮ ವ್ಯವಸ್ಥೆ ನಗರದಲ್ಲಿ ಸೋತಿದೆ. ಎಚ್ಚರಿಕೆಯಷ್ಟೆ ನಮ್ಮದಾಗಿರಲಿ.