ಬರಹ: ಗಜೇಂದ್ರಸ್ವಾಮಿ, ಶಿವಮೊಗ್ಗ
ಚಿತ್ರ: ಎ. ರವಿ, ಸೋಮಿನಕೊಪ್ಪ, ಶಿವಮೊಗ್ಗ
ಬದುಕು ಎಷ್ಟು ವಿಚಿತ್ರ ಗೊತ್ತಾ? ನಾನು ಬದುಕಿದ್ದೆ, ಬದುಕುತ್ತಿರುವುದೇ ಗ್ರೇಟ್ ಎನಿಸುತ್ತದೆ.
ತಂದೆ ತಾಯಿ ಬಂಧು ಬಳಗ ಎಲ್ಲರ ಜೊತೆ ನಾನು ಸುಖಿಯಾಗಿದ್ದೇನೆ.
ಇಂಥಹದೊಂದು ಪೀಠಿಕೆಯನ್ನು ಹಾಕಲು ಕಾರಣ ಇವತ್ತು ಪತ್ರಿಕಾ ರಂಗದ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಓರ್ವ ತಳ್ಳುವ ಗಾಡಿಯಲ್ಲಿ ಅದೂ ಕಬ್ಬಿಣದ ರಾಡಿನ ಬಲವಾದ ಗಾಡಿಯಲ್ಲಿ ಮಕ್ಕಳ ಆಟಿಕೆಗಳನ್ನು ತುಂಬಿಕೊಂಡು ಅದನ್ನು ತಳ್ಳುತ್ತಾ ಮಾರುತ್ತಿದ್ದ.
ಆತ ರಸ್ತೆಯಲಿ ರಭಸದಿಂದ ಮುನ್ನುಗ್ಗುತ್ತಿದ್ದ. ಏಕೋ ಏನೋ ಗೊತ್ತಿಲ್ಲ ಅವನ ಜೊತೆ ಮಾತಾಡಬೇಕು ಎನಿಸಿತು. ಜೊತೆಗೆ ಬರುತ್ತಿದ್ದ ಜಿಬಿರು ಮಳೆ ನನ್ನ ಆಸೆಗೆ ತಡೆ ನೀಡಲಿಲ್ಲ.
ಮಧ್ಯಪ್ರದೇಶದ ಹಳ್ಳಿಯೊಂದರಿಂದ ಬಂದ ಆತ ಸಂಪೂರ್ಣವಾಗಿ ಕನ್ನಡ ಮಾತನಾಡದಿದ್ದರೂ ಅಚ್ಚುಕಟ್ಟಾಗಿ ಜನರ ಜೊತೆ ಅನ್ಯ ಬಾಷೆ ಹಾಗೂ ಮೌಖಿಕ ಸಂದೇಶಗಳ ಮೂಲಕ ಮಾತನಾಡುತ್ತಿದ್ದ. ಆತ ಕಷ್ಟಪಡುತ್ತಿದ್ದ ರೀತಿ ನೋಡಿ ಬದುಕಿಷ್ಟು ಕಷ್ಟವೇ ಎನಿಸಿತು.
ರೊಕ್ಕದ ಲೆಕ್ಕದಲ್ಲಿ ಆತನ ದಿನದ ದುಡಿಮೆ ಸಾಮಾನ್ಯವೇ ಆಗಿತ್ತು. ಆತನ ಹೆಸರು ಗಗನ್ ಆತನಿಗೆ ಬರುವ ಅರ್ಧಂಬರ್ಧ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ನಾನು ಬರಹಗಾರ, ಪೇಪರ್ ವಾಲೆ ಎಂದೆಲ್ಲಾ ಹೇಳುತ್ತಾ ಮಾತಿಗೆ ನಿಂತೆ. ಇಲ್ಲಿ ಕುಳಿತಿದ್ದಕ್ಕಿಂತ ಕುಳಿತುಕೊಳ್ಳಲು ಅವಕಾಶ ಇರಲಿಲ್ಲ. ಆತ ಗಾಡಿಯನ್ನು ಮುಂದೆ ತಳ್ಳುತ್ತಲೇ ಮುಂದೆ ಸಾಗುತ್ತಿದ್ದ. ಆತನ ಗಾಡಿಯ ಜೊತೆ ನಾನು ಸಹ ಕೈ ಹಾಕಿ ಮುಂದೆ ತಳ್ಳುತ್ತಾ ಮಾತನಾಡುತ್ತಾ , ಹೊರಟಾಗ ಗಗನ್ ಹೇಳಿದ ಕೆಲಸಗಳ ನಡುವಿನ ಸತ್ಯಗಳು ನನಗೆ ಈಗ ನೂರಾರು ಪ್ರಶ್ನೆಗಳನ್ನು ಹುಟ್ಟಿಸಿವೆ.
ಯಾವುದೋ ಊರಿನಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡು ಅಪ್ಪ ಅಮ್ಮನಿಗೆ ಮನೆಗೆ ವಾರದ, ತಿಂಗಳ ದುಡಿಮೆಯ ಒಂದಿಷ್ಟು ಭಾಗವನ್ನು ನೀಡುತ್ತಾ ಎಲ್ಲರೊಂದಿಗೆ ಖುಷಿಯಾಗಿ ನಗುತ್ತಿರುವ ಗಗನ್ ಇಲ್ಲಿ ಅತ್ಯಂತ ವಿಶೇಷವಾಗಿ ಕಾಣಿಸುತ್ತಾನೆ.
ನನ್ನ ಜೊತೆಗೆ ಇದ್ದ ನಮ್ಮ ತುಂಗಾ ತರಂಗ ಪತ್ರಿಕೆಯ ರವಿ ಫೋಟೋ ಕ್ಲಿಕ್ಕಿಸಿದ್ದು ಈ ಬಗೆಯಲ್ಲಿವೆ. ಗಗನ್ ನಿಜಕ್ಕೂ ಖುಷಿಯ ಹುಡುಗನೇ ಹೌದು. ಈ ಪ್ರಶ್ನೆಗೆ ಕೊನೆಯ ಹಂತದವರೆಗೆ ಕೆಲವು ಉತ್ತರ ಸಿಗಲೇ ಇಲ್ಲ. ನಿತ್ಯ 300 ರಿಂದ 400 ರೂಪಾಯಿ ಆದಾಯ ಸಂಪಾದಿಸುವ ಗಗನ್ ನಿತ್ಯದ ಕೂಳನ್ನು ಮುಗಿಸಿ, ಮಕ್ಕಳನ್ನು ರಂಜಿಸಿ ಅವರೊಂದಿಗೆ ತಾನು ಮಗುವಾಗಿ ತನ್ನನ್ನು ತಾನು ಆ ಕೆಲಸದೊಳಗೆ ಅರ್ಪಿಸಿಕೊಂಡಿದ್ದಾನೆ. ಕೆಲವೊಮ್ಮೆ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದರೆ ಒಳ್ಳೆಯದಾಗುತ್ತದೆ ಎಂಬುದನ್ನು ಆತ ಅರಿತುಕೊಂಡಂತಿದೆ.
ಅಲ್ಲಿ ಬಲೂನ್ ನಿಂದ ಹಿಡಿದು ಮಕ್ಕಳ ಆಟಿಕೆಗಳು ಅವುಗಳ ಹೆಸರುಗಳು ಸಹ ಅವನಿಗೆ ಗೊತ್ತಿಲ್ಲ. ನೋಡಲು ಚಂದಾಗಿ ಕಾಣುವ ಆಟಿಕೆಗಳನ್ನು ಯಾವುದೇ ಮಗು ನೋಡಿದರೂ ಅಪ್ಪ ಅಮ್ಮನಿಗೆ ನನಗಿದು ಬೇಕು ಎಂದು ಕೇಳುವಂತಹ ವ್ಯವಸ್ಥೆಯ ಮಗುವಿನ ಮುಗ್ಧ ಮನಸ್ಸು ಇಲ್ಲಿ ಕಾಣುತ್ತದೆ.
ಮಧ್ಯಪ್ರದೇಶದ ಭೂಪಾಲ್ ಸಮೀಪದ ಹಳ್ಳಿಯೊಂದರಿಂದ ಬಂದ ಈತ ನನಗೆ ಇವತ್ತು ಒಂದು ದೊಡ್ಡ ಆಸ್ತಿಯಾಗಿ ಕಂಡದ್ದಂತೂ ಸತ್ಯ. ಏಕೆಂದರೆ ಬದುಕು ತನ್ನ ಕೆಲಸದ ನಡುವೆ ಸೇರಿಕೊಂಡಿರುತ್ತದೆ. ಅದಕ್ಕೆ ಅಲ್ಲವೇ ಬಸವಣ್ಣ ಹೇಳಿದ್ದು “ಕಾಯಕವೇ ಕೈಲಾಸ” ನನ್ನ ಕೆಲಸ ನನಗೆ ಮುಖ್ಯ ಎಂಬುದನ್ನು ಮರೆಯದಂತಹ ವಾತಾವರಣ ಸದಾ ನಮ್ಮದಾಗಿರಲಿ. ಫಲ ಸಿಕ್ಕೇ ಸಿಗುತ್ತದೆಯಲ್ಲವೇ? ಸಭ್ಯ, ಸುಸಂಸ್ಕೃತ ಕೆಲಸ ಮಾಡಲು ನಮಗೇಕೆ ನಾಚಿಕೆಯಾಗಬೇಕಲ್ಲವೇ?
ಇದನ್ನೂ ಓದಿ:
ಆ.8-9 ಸಂಭ್ರಮದ ಗುಡ್ಡೇಕಲ್ ಜಾತ್ರೆ |ಲಕ್ಷಾಂತರ ಭಕ್ತಾದಿಗಳು ಆಗಮನದಿಂದ ಬದಲಿ ರಸ್ತೆ ಮಾರ್ಗ: ಟ್ರಸ್ಟ್ ಅಧ್ಯಕ್ಷ ಡಿ. ರಾಜಶೇಖರಪ್ಪ https://tungataranga.com/?p=22408
ಡೆಹರಾಡೂನ್‍ನ| ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶ ಪರೀಕ್ಷೆ https://tungataranga.com/?p=22405
ಈ ಮೇಲಿನ👆👆 ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ