ಶಿವಮೊಗ್ಗ, ನ.07: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ 40ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದ ಮಲವಗೊಪ್ಪ ಬಸ್ಟಾಪ್ ನಲ್ಲಿ ಆರೋಪಿಗಳು ಐಪಿಎಲ್‍ ಕ್ರಿಕೆಟ್‍ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂಂದಿಗಳನ್ನೊಳಗೊಂಡ ತಂಡವು

ಶೇಖರ್

ಆರೋಪಿಗಳನ್ನು ವಶಕ್ಕೆ ಪಡೆದು, ಆರೋಪಿಗಳಿಂದ 40 ಸಾವಿರ ರೂ ನಗದು ಹಾಗೂ 2 ಮೊಬೈಲ್ ಪೋನ್‍ಗಳನ್ನು ವಶ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಮಲವಗೊಪ್ಪದ ಮಹ್ಮದ ಮಸೂದ್ ಹಾಗೂ ಜೆಪಿ ನಗರದ ಶೇಖರ್ ಬಂಧಿತ ಆರೋಪಿಗಳು

By admin

ನಿಮ್ಮದೊಂದು ಉತ್ತರ

You missed

error: Content is protected !!