ಶಿವಮೊಗ್ಗ, ಜು.21:
ಹೆಂಡತಿಯನ್ನು ಕೊಂದ ಆರೋಪಿ ಗಂಡನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.


ಸಮಗ್ರ ವಿವರ:
ಬೊಮ್ಮನಕಟ್ಟೆಯ ವಾಸಿ 27 ವರ್ಷದ ಮಹಿಳೆಗೆ ಆಕೆಯ ಗಂಡ ಅಲ್ಲಾಭಕ್ಷಿ ಎಂಬಾತ ಮದುವೆಯಾದ ದಿನದಿಂದಲೂ ಕೌಟುಂಬಿಕ ಹಿಂಸೆ ನೀಡುತ್ತಿದ್ದು, ದಿನಾಂಕಃ 05-01-2021 ರಂದು ಮಧ್ಯಾಹ್ನ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯ ತನ್ನ ವಾಸದ ಮನೆಯಲ್ಲಿ ಹೆಂಡತಿಗೆ ಡಿಶ್ ಕೇಬಲ್ ವೈರ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.


ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ರವಿ ಎನ್, ಎಸ್, ಪಿಐ, ವಿನೋಬನಗರ ಪೊಲೀಸ್ ಠಾಣೆ ರವರು ಆರೋಪಿತನನ್ನು ದಸ್ತಗಿರಿ ಮಾಡಿ, ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಮಮತ ಕೆ.ಎಸ್. ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಕೆ. ಮಾನು ರವರು ದಿನಾಂಕ: 20-07-2023 ರಂದು ಆರೋಪಿತನಾದ ಅಲ್ಲಾಭಕ್ಷಿ, 38 ವರ್ಷ, ಬೊಮ್ಮನಕಟ್ಟೆ ಈತನಿಗೆ ಜೀವಾವಧಿ ಶಿಕ್ಷೆ ಮತ್ತು 25,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 04 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!