ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿತು.
ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ನಮ್ಮ ಟ್ರಸ್ಟ್ ಈ ಹಿಂದೆಯೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಟು ಪಟ್ಟಿ ಕಟ್ಟಿ ಪ್ರತಿಭಟನೆ ನಡೆಸಿದ್ದಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪನವರು ಕೂಡ ಕುವೆಂಪು ಅವರ ಹೆಸರನ್ನೆ ಇಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಸಂಸದ ರಾಘವೇಂದ್ರ ಕೂಡ ಇದಕ್ಕೆ ಸಮಹಮತ ನೀಡಿದ್ದಾರೆ.
ಹಾಗಾಗಿ ಕುವೆಂಪುರವರ ಹೆಸರನ್ನು ಇಡಲು ಸಂಸದ ರಾಘವೇಂದ್ರ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಯನ ಕೇಂದ್ರ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಪ್ರೊ. ಕಲ್ಲನ, ಡಾ. ಕೆ.ಬಿ. ವೆಂಕಟೇಶ್, ಹೆಚ್.ಎಂ. ಸಂಗಯ್ಯ, ಶಿವಣ್ಣ, ನಾಗೇಶ್ ರಾವ್, ಜಿ. ಮಂಜುಳಾ, ಶಂಕ್ರಾ ನಾಯ್ಕ, ನರಸಿಂಹ ಮೂರ್ತಿ, ರೇಖಾ ನಾಯ್ಕ, ಸೋಮಶೇಖರಯ್ಯ ಇದ್ದರು.