ಶಿವಮೊಗ್ಗ,ಜು. 18:
ಸಮಾಜ ನಮ್ಮನ್ನು ಹೇಗೆ ನೋಡಿಕೊಳ್ಳುತ್ತದೆ ಎನ್ನುವುದಕ್ಕಿಂತ ನಾವು ಸಮಾಜವನ್ನು ಹೇಗೆ ಪ್ರೀತಿಸುತ್ತೇವೆ ಎಂಬುದಾಗಿದೆಯಲ್ಲವೇ? ಅಂತೆಯೇ ಈ ಸಮಾಜ ಮಾನವೀಯ ನೆಲೆಗಟ್ಟಿನ ಮನುಷ್ಯನನ್ನು ಹೇಗೆ ತಾನೇ ರೂಪಿಸುತ್ತದೆ. ಅದಕ್ಕೆ ತಕ್ಕ ವಾತಾವರಣ, ಪರಿಶ್ರಮ ಹಾಗೂ ಪೂರಕ ಅಂಶಗಳು ಇಲ್ಲಿ ನೆಲೆಯಾಗಿ ನಿಲ್ಲುತ್ತವೆ ಅಲ್ಲವೇ?
ಇಂತಹ ಒಂದು ಮಾನದಂಡದಡಿ ಒಬ್ಬ ಮನುಷ್ಯ ಹೇಗೆ ತಾನೇ ರೌಡಿ ಆಗುತ್ತಾನೆ. ಕಳ್ಳರ ಗುಂಪಿನ ನಾಯಕನಾಗುತ್ತಾನೆ. ಅದರ ನಡುವಿನ ಪ್ರೀತಿ ಹೇಗೆ ಶಾಶ್ವತವಾಗಿ ನಿಲ್ಲುತ್ತದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ವಿಭಿನ್ನವಾಗಿ ಚಿತ್ರಿಸಿರುವ ಥಗ್ಸ್ ಆಫ್ ರಗಡ ಕಿರುಚಿತ್ರ ಟ್ರೈಲರ್ ಹಂತದಲ್ಲೇ ಸಾವಿರಾರು ಜನರ ವೀಕ್ಷಣೆಗೆ ಸಿಕ್ಕು ಅಪಾರ ಜನ ಮೆಚ್ಚಿಗೆ ಗಳಿಸಿದೆ.


ಬರುವ ಜುಲೈ 21ರ ಶನಿವಾರ ಬಿಡುಗಡೆಯಾಗಲಿರುವ ಈ ರಗಡು ಕಿರುಚಿತ್ರ ಶಿವಮೊಗ್ಗದ ಹೊಸ ತಲೆಮಾರಿನ ನವ ಕಲಾವಿದರ ಒಟ್ಟಾರೆ ಪ್ರಯತ್ನದ ಮನೋಜ್ಞ ಅಭಿನಯವನ್ನು ಹೊಂದಿದೆ.
ಶಿವಮೊಗ್ಗ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅಲ್ಲಿಯೇ ಓದಿದ ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಯಾಗಿರುವ ಕಿಶನ್ ಅವರ ನಟನೆ ನಿರ್ದೇಶನ, ನಿರ್ಮಾಣದಲ್ಲಿ ಮೂಡಿರುವ ರಗಡ ಕಿರುಚಿತ್ರ ವಿಭಿನ್ನ ಕಥಾಹಂದರವನ್ನು ಹೊಂದಿದೆ.


ಕಥೆ ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಕಿಶನ್ ಅವರೊಂದಿಗೆ ಛಾಯಾಗ್ರಹಣ, ಸಂಕಲನ ಹಾಗೂ ಸಂಗೀತವನ್ನು ಅನುಷ್ ಗೌಡ ನೀಡಿದ್ದಾರೆ. ಕಥಾ ಸಂಭಾಷಣೆಯನ್ನು ಹೇಂತ ಕುಮಾರ್ ಅವರೊಂದಿಗೆ ನಿಬಾಯಿಸಿದ್ದಾರೆ.
ನಾಯಕನಾಗಿ ಕಿಶನ್, ನಾಯಕಿಯಾಗಿ ಪ್ರಾರ್ಥನಾ ಹಾಗೂ ಮುಖ್ಯ ಪಾತ್ರಗಳಲ್ಲಿ ಪೃಥ್ವಿ ಗೌಡ, ಕಿರಣ್, ಸೈಯದ್ ನೌಮಾನ್, ಥನುಷ್, ಸಮೃದ್, ಹರ್ಷ, ಸುಜಿತ್, ಪಾರ್ಥ ಚಿರಂತನ್, ವಿನಯ್ ರಾಜು, ಹರೀಶ್ ಗೌಡ, ಸುಮುಖ, ಸೃಷ್ಟಿ ಕಾರ್ತಿಕ್, ಕೀರ್ತನ ಸೇರಿದಂತೆ ೪೫ಕ್ಕೂ ಹೆಚ್ಚು ಕಲಾವಿದರು ನಟಿಸಿರುವ ಈ ಚಿತ್ರ ಸಾಕಷ್ಟು ಅಭಿಮಾನಿಗಳನ್ನು ಈಗಾಗಲೇ ವೀಕ್ಷಣೆಗೆ ಕಾಯುವಂತೆ ಸಿದ್ಧಪಡಿಸಿಕೊಂಡಿದೆ.
ಕಿರುಚಿತ್ರದ ಪೋಸ್ಟರ್ ಜವಾಬ್ದಾರಿಯನ್ನು ಸುಮುಖ ಅವರು ಹೊತ್ತುಕೊಂಡಿದ್ದು ಫೋಟೋಗ್ರಫಿಯನ್ನು ಮದ್ವೇಶ್ ಹಾಗೂ ಡ್ರೋನ್ ಕ್ಯಾಮೆರಾವನ್ನು ಯಶಸ್ ಗೌಡ ನೋಡಿಕೊಂಡಿದ್ದಾರೆ.


ಸ್ಯಾಂಡಲ್ ವುಡ್ ನಟ ಪೃಥ್ವಿ , ಎಂಬ ರಾಮಾಚಾರಿ ಚಲನಚಿತ್ರದ ಅಶ್ವಿತಿ ಶೆಟ್ಟಿ, ಲವ್ ಮೂವಿಯ ಸುಷ್ಮಾ, ಜೀ ಕನ್ನಡ ಕಾಮಿಡಿ ಕಿಲಾಡಿಯ ಸದಾನಂದ ಸೇರಿದಂತೆ ಹಲವರು ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
೨೧ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕೆ ಎಸ್ ಎಸ್ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ ಮೂಲಕ ನೋಡಬಹುದಾಗಿದೆ.


ಶಿವಮೊಗ್ಗಯ ಯುವ ಪೀಳಿಗೆ ತಂದಿರುವ ವಿಭಿನ್ನ ಚಿತ್ರಕಥೆಯ ಥಗ್ಸ್ ಆಫ್ ರಗಡ ಸಿನಿಮಾ ಗೆ ಹಾಗೂ ತಂಡಕ್ಕೆ ಶುಭ ಕೋರಿರುವ ತುಂಗಾತರಂಗ ದಿನಪತ್ರಿಕೆ ಬಳಗವು ಪ್ರತಿಭಾವಂತ ಯುವ ತಂಡವನ್ನು ಪ್ರೋತ್ಸಾಹಿಸಲು ಸಾರ್ವಜನಿಕರಲ್ಲಿ ವಿನಂತಿಸಿದೆ.

KSS CREATIONS YOUTUBE

ವಿವರಗಳಿಗೆ ಕಿಶನ್ 6361538840

By admin

ನಿಮ್ಮದೊಂದು ಉತ್ತರ

You missed

error: Content is protected !!