ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ‍್ಸ್ ಅಸೋಸಿಯೇಷನ್ (ಎಸ್‌ವಿ ಪಿಎ) ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವೀಡಿಯೋ ಕಾಂಟೆಸ್ಟ್ -೨೦೨೩ ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ವಿ. ಸತೀಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಛಾಯಾಗ್ರಾಹಕರಿಗೆ ಎಕ್ಸಲೆಂಟ್ ಕ್ಯಾಂಡಿಡ್, ಪೋಟ್ರೆಟ್, ಆಕ್ಷನ್ ವೆಡ್ಡಿಂಗ್, ಔಟ್‌ಡೋರ್ ಪ್ರಿ ವೆಡ್ಡಿಂಗ್, ಲೈಟಿಂಗ್, ನ್ಯೂ ಬಾರ್ನ್ ಬೇಬಿ ಫೋಟೋಗ್ರಪಿ ಸ್ಪರ್ಧೆ ಇದ್ದು, ಸ್ಪರ್ಧೆಗೆ ೮೧೨ ಅಳತೆಯ ವಿವಿಧ ಮೂರು ಫೋಟೋಗಳನ್ನು ಕಳುಹಿಸಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿ ಸುವವರು ರಾಜ್ಯದ ಯಾವುದಾದರೂ ಛಾಯಾಗ್ರಾ ಹಕರ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಹೊಂದಿ ರಬೇಕು ಎಂದರು.
ವೀಡಿಯೋಗ್ರಾಫರ್‌ಗಳಿಗೆ: ಎಕ್ಸಲೆಂಟ್ ಟ್ರೆಡಿಷನಲ್-ಸಿನಿಮ್ಯಾಟಿಕ್ ವೀಡಿಯೋ ಶೂಟರ್, ಡ್ರೋನ್-ಪ್ರಿ ವೆಡ್ಡಿಂಗ್ ಶೂಟರ್ ಸ್ಪರ್ಧೆ ಇದ್ದು, ಪ್ರತಿಯೊಂದು ಸ್ಪರ್ಧೆಗೆ ಮೂರು ನಿಮಿಷದ ವೀಡಿಯೋ ಚಿತ್ರಣವನ್ನು ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ ಫೈಲ್‌ನಲ್ಲಿ ಕಳುಹಿಸಬೇಕು.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ರಾಜ್ಯದ ಯಾವುದಾದರೂ ಛಾಯಾಗ್ರಾಹಕರ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಹೊಂದಿರಬೇಕು ಎಂದರು. ಎಡಿಟರ್‌ಗಳಿಗೆ: ಎಕ್ಸಲೆಂಟ್ ಟ್ರೆಡಿಷನಲ್-ಪ್ರಿ ವೆಡ್ಡಿಂಗ್ ವೀಡಿಯೋ ಎಡಿಟರ್, ಸಿನಿಮ್ಯಾಟಿಕ್ ವೆಡ್ಡಿಂಗ್ ಎಡಿಟರ್ ಹಾಗೂ ಆಲ್ಬಮ್ ಡಿಸೈನರ್ ಸ್ಪರ್ಧೆ ಇದ್ದು, ಸ್ಪರ್ಧೆಗೆ ೮೧೨ ಅಳತೆಯ ವಿವಿಧ ಮೂರು ಫೋಟೋಗಳನ್ನು ಕಳುಹಿಸಬೇಕು.
ಛಾಯಾಗ್ರಾಹಕರು ವೀಡಿಯೋ ಕಳುಹಿಸಬೇಕಾದ ವಾಟ್ಸಾಪ್ ನಂ. ೯೩೫೩೨೬೦೪೩೧ರಲ್ಲಿ ಕಳುಹಿಸಬೇಕು. ಎಲ್ಲಾ ವಿಭಾಗದಲ್ಲಿ ವಿಜೇತರಾದವರಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಫೋಟೋಗಳನ್ನು ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ‍್ಸ್ ಅಸೋಸಿ ಯೇಷನ್ ನಂ.೧೪, ೪ನೇ ತಿರುವು, ಜಿ.ಎಸ್.ಕೆ.ಎಂ. ರಸ್ತೆ ಶಿವಮೊಗ್ಗ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೮೪೪೦೫೮೧೦೦, ೯೯೪೫೩೯೧೧೧೪ ಅಥವಾ ೯೮೮೦೮೦೦೯೮೭ರಲ್ಲಿ ಸಂಪರ್ಕಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ.ಜಿ. ಪ್ರಸಾದ್, ಹೆಚ್.ಎಸ್.ಚೇತನ್, ಎಸ್.ಎಲ್ ಧನಂಜಯ್, ಪರಮೇಶ್, ಕೆ.ಸಿ. ಮೋಹನ್ ಇತರರಿದ್ದರು