ಸಾಗರ : ಚಿನ್ನಬೆಳ್ಳಿ ಕೆಲಸಗಾರರ ಹಿತರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚಿನ್ನಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಒಕ್ಕೂಟ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದೆ.

ಸರ್ಕಾರದಿಂದ ಚಿನ್ನಬೆಳ್ಳಿ ಕೆಲಸಗಾರರಿಗೆ ಗುರುತಿನ ಚೀಟಿ ನೀಡಬೇಕು. ಕಾರ್ಮಿಕರ ಪರಿಷ್ಕೃತ ಪಟ್ಟಿಯಲ್ಲಿ ಚಿನ್ನಬೆಳ್ಳಿ ಕೆಲಸಗಾರರನ್ನು ಖಾಯಂ ಆಗಿ ಸೇರಿಸಬೇಕು. ಕರ್ನಾಟಕದಲ್ಲಿ ಜ್ಯುಯಲರಿ ಪಾರ್ಕ್ ಮಾಡುವುದು, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲಸೌಲಭ್ಯ, ಚಿನ್ನಬೆಳ್ಳಿ ಕಾರ್ಮಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ,

ಪ್ರತಿ ತಾಲ್ಲೂಕಿನಲ್ಲಿ ಚಿನ್ನಬೆಳ್ಳಿ ಸಂಕೀರ್ಣ ನಿರ್ಮಾಣ, ೬೦ವರ್ಷ ಮೇಲ್ಪಟ್ಟ ಕೆಲಸಗಾರರಿಗೆ ಮಾಸಾಶನ ಮತ್ತು ಆರೋಗ್ಯ ವಿಮೆ, ಚಿನ್ನಬೆಳ್ಳಿ ವ್ಯಾಪಾರಸ್ಥರಿಗೆ ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಚಿನ್ನಬೆಳ್ಳಿ ಕೆಲಸಗಾರರ ಮತ್ತು ವ್ಯಾಪಾರಸ್ಥರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕು. ಚಿನ್ನಬೆಳ್ಳಿ ಕೆಲಸಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಸಹಾಯಧನ ನೀಡಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಮಹಾಬಲೇಶ್ವರ ಶೇಟ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.