ಶಿವಮೊಗ್ಗ: ಸೈಬರ್ ಟಿಪ್ ಲೈನ್ ನಿಂದ ಬಂದ ಮಾಹಿತಿ ಮೇರೆಗೆ ಫೇಸ್ ಬುಕ್ ಮೆಸೆಂಜರ್ ಮೂಲಕ ಮಕ್ಕಳ ಅಶ್ಲೀಲ ವೀಡಿಯೋ ಫಾರ್ವರ್ಡ್ ಮಾಡುತ್ತಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಕಲಂ 67 (ಬಿ) ಐಟಿ ಕಾಯ್ದೆ ಯಂತೆ ಶಿವಮೊಗ್ಗದ ಸಿ.ಇ.ಎನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಅಶ್ಲೀಲ ವೀಡಿಯೋ ಅಥವಾ ಚಿತ್ರಗಳನ್ನು ಅಂತರ್ಜಾಲದ ಮೂಲಕ ಹುಡುಕುವುದು, ಶೇಖರಿಸುವುದು & ಫಾರ್ವರ್ಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67 (B) ಪ್ರಕಾರ ಅಪರಾಧ ವಾಗಿರುತ್ತದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.


ಆರೋಪಿ ನಿದಿಗೆಯ ಶಿವಪುರಥಾಂಡದ ರಘು ಡಿ. (25 ) ಎಂಬಾತನನ್ನು ಇಂದು ಸಿ.ಇ.ಎನ್ ಪೋಲಿಸರು ಬಂದಿಸಿದ್ದು ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!