ಶಿವಮೊಗ್ಗ :-ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎಸ್. ಆರ್. ಎನ್. ಎಮ್. ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಜುಲೈ ೧೩ ರಂದು ಬೆಳಿಗ್ಗೆ ಮುಂಗಾರು ಜಾನಪದ ಸಂಭ್ರಮ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿ ಪುನೇದಹಳ್ಳಿ ಸಮ್ಮದ್ ಸಾಹೇಬರು ಬರೆದ ಮೈಲಾರ ಮಹಾದೇವಾ ಅವರ ಕುರಿತು ಲಾವಣಿ ಪದ್ಯವಿದೆ. ಈ ಲಾವಣಿ ಪದವನ್ನು ಜಾನಪದ ಪ್ರಕಾರಗಳಲ್ಲಿ ಹಾಡುವ ವಿಶ್ಲೇಷಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಲಾವಣಿ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ನಾಡಿನ ಪ್ರಸಿದ್ಧ ಲಾವಣಿ ಕಲಾವಿದ ಆರ್. ಎಸ್. ಶಂಕರಣ್ಣ ಅವರು ಭಾಗವಹಿಸಲಿದ್ದಾರೆ.
ಜುಲೈ ೧೩ ನೆಯ ಗುರುವಾರ ಬೆಳಿಗ್ಗೆ ೧೦-೩೦ ಕ್ಕೆ ಎನ್.ಈ.ಎಸ್. ಆವರಣದಲ್ಲಿರುವ ಎಸ್. ಆರ್. ಎನ್. ಎಂ. ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.*
*ಪ್ರಿನ್ಸಿಪಾಲರಾದ ಡಾ. ಅರವಿಂದ ಕೆ. ಎಲ್. ಅಧ್ಯಕ್ಷತೆಯಲ್ಲಿ ಡಿ. ಮಂಜುನಾಥ ಉದ್ಘಾಟಿಸಲಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಕೆ. ಲಕ್ಷ್ಮಣ್, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ. ಜಿ. ವೆಂಕಟೇಶ್ ಭಾಗವಹಿಸಲಿದ್ದಾರೆ.
ಅದೇ ದಿನ ಮಧ್ಯಾಹ್ನ ೨-೩೦ ಕ್ಕೆ ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿ ಲಾವಣಿ ಹಾಡು, ವಿಶ್ಲೇಷಣೆ ಒಳಗೊಂಡ ಮುಂಗಾರು ಜಾನಪದ ಸಂಭ್ರಮ ನಡೆಯಲಿದೆ. ಪ್ರಿನ್ಸಿಪಾಲರಾದ ಪ್ರೊ. ಎನ್. ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಡಿ. ಮಂಜುನಾಥ ಉದ್ಘಾಟಿಸಲಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಎಂ. ಮುತ್ತಯ್ಯ, ಕಜಾಪ ಜಿಲ್ಲಾ ಉಪಾಧ್ಯಕ್ಷರಾದ ಡಿ. ಸಿ. ದೇವರಾಜ್, ಪ್ರಧಾನ ಕಾರ್ಯದರ್ಶಿ ಡಾ. ಕೆ. ಜಿ. ವೆಂಕಟೇಶ್