:ಸಾಗರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಅನಾಹುತ ನಷ್ಟಗಳಿಗೆ ತುರ್ತು ಪರಿಹಾರ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ನಬೇಳೂರು ಸೂಚನೆ ನೀಡಿದರು.
ಅವರು ಸಾಗರದ ಜೋಸೇಪ್ ನಗರದ ಮನೆಯೊಂದರ ಗೋಡೆ ಕುಸಿದು ಹಾನಿಗೊಳಗಾದ ಸ್ಥಳ ಪರಿಶೀಲನೆ ನಡೆಸಿ ಪರಿಹಾರದ ಚೆಕ್ ವಿತರಣೆ ಮಾಡಿ ಸಾಂತ್ವಾನ ಹೇಳಿದರು.
ನಂತರ ನೆಹರೂನಗರದ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಮಳೆಯಿಂದ ಹಾನಿಯಾಗಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾಗರ ನಗರ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಮನೆಗಳ ಗೋಡೆಗಳು ಕುಸಿದಿದ್ದು,ಗ್ರಾಮಾಂತರ ಪ್ರದೇಶಗಳಲ್ಲಿಯೂ ಮನೆ ಮತ್ತು ಕೊಟ್ಟಿಗೆಗಳಿಗೆ ಹಾನಿಯುಂಟಾಗಿರುವ ವರದಿಗಳಾಗಿವೆ.ಇದರಿಂದ ನಷ್ಟ ಅನುಭವಿಸಿರುವವರಿಗೆ ತಲಾ ೧೦,೦೦೦ ರೂಗಳ ಪರಿಹಾರ ತಕ್ಷಣ ಒದಗಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಹೆಚ್ಚಿನ ಪರಿಹಾರವನ್ನು ನಷ್ಠದ ಪ್ರಮಾನವನ್ನು ಆಧರಿಸಿ ಪುನಃ ಪರಿಹಾರದ ಮೊತ್ತವನ್ನು ವಿತರಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದ ಅವರು ನೆಹರೂ ನಗರದ ಉರ್ದು ಶಾಲೆಯ ಒಂದು ಕೊಠಡಿಯ ಮೇಲ್ಚಾವಣಿಗೆ ಹಾನಿಯುಂಟಾಗಿದ್ದು,ಶಾಲೆಯ ಕಾಂಪೌಂಡ್ ಸಹಿತ ಕುಸಿದಿದೆ.ಆದ್ದರಿಂದ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಲಲು ಆಡಳಿತಕ್ಕೆ ಸೂಚಿಸಿದ್ದೇನೆ ಎಂದರು.
ಮಳೆಯಿಂದ ಹಾನಿಯುಂಟಾಗಿರುವ ಶಾಲೆಗಳ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದರು.ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮತ್ತು ಮೂಲಭೂತ ಸೌಲತ್ತುಗಳ ಕಲ್ಪಿಸಲು ಆಡಳಿತ ಬದ್ದವಾಗಿದ್ದು,ಶಿಕ್ಷಣ ಸಚಿವರಿಂದ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದರು.
ಕಳೆದ ೬ ವರ್ಷಗಳ ಹಿಂದೆ ಮಾಜಿ ಸಚಿವ ಕಾಗೋಡುತಿಮ್ಮಪ್ಪನವರು ಆಸಕ್ತಿಯಿಂದ ಸುಸಜ್ಜಿತ ಮೀನು ಮಾರುಕಟ್ಟೆ ನೂತನ ಸಂಕೀರ್ಣ ಕಟ್ಟಡ ನಿರ್ಮಿಸಿದ್ದರು.ಸದರಿ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಗೋಪಾಲಕೃಷ್ನ ಬೇಳೂರು ಕಳೆದ ೫ ವರ್ಷಗಳ ಆಡಳಿತದಲ್ಲಿ ಹಿಂದಿನ ಶಾಸಕರ ದಿವ್ಯ ನಿರ್ಲಕ್ಷ್ಯದ ಪರಿಣಾಮ ನೆನೆಗುದಿಗೆ ಬಿದ್ದಿರುವ ಮೀನು ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲಿಸಿ ಮುಂದಿನ ಮೂರು ತಿಂಗಳೊಳ ನೂತನ ಕಟ್ಟಡ ಲೋಕಾರ್ಪಣೆಗೆ ಕ್ರಮವಹಿಸುವಂತೆ ಸೂಚಿಸಿದರು.
ಹಿಂದಿನ ಶಾಸಕರು ಹಾಲಪ್ಪನವರು ಮೀನು ಮಾರುಕಟ್ಟೆಗೆ ಕೇವಲ ಮುಸ್ಲಿಂರು ಬರುತ್ತಾರೆ ಎಂಬ ಕಾರಣಕ್ಕೆ ಮೀನು ಮಾರುಕಟ್ಟೆ ಕಾಮಗಾರಿ ನಿರ್ಲಕ್ಷಿಸಿ ಉದ್ಘಾಟನೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಬೇಳೂರು ಆರೋಪಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗಣಪತಿಮಂಡಗಳಲೆ,ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್‌ಬಾಬು,ನಗರಸಭೆ ಮಾಜಿ ಸದಸ್ಯ ಮಂಜೂರಾಲಿಖಾನ್,ತಾರಾಮೂರ್ತಿ,ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಕೆ.ನಾಗಪ್ಪ,ಅಬ್ದುಲ್‌ಹಮೀದ್,ಶಿಕ್ಷಣ ಇಲಾಖೆಯ ಗುರುರಾಜ್ ಮೊದಲಾದವರು ಇದ್ದರು.