ಶಿವಮೊಗ್ಗ
ಕಿವಿ, ಮೂಗು ಮತ್ತು ಗಂಟಲು ವೈದ್ಯರ ಅಧಿಕೃತ ಶಾಖೆಯಾದ ಮಲ್ನಾಡ್ ಎಒಐ ವತಿಯಿಂದ ಕಿವಿ.ಮೂಗು ಮತ್ತು ಗಂಟಲು ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಕೊಡುಗೆ ನೀಡುವ ಸಲುವಾಗಿ ರೂ.15 ಲಕ್ಷ ವೆಚ್ಚದ ಟೆಂಪೊರಲ್ ಬೋನ್ ಡಿಸೆಕ್ಷನ್ ಯುನಿಟ್ ಮತ್ತು ಎಫ್‍ಇಎಸ್‍ಎಸ್ ಕ್ಯಾಡವೆರಿಕ್ ಡೆಸೆಕ್ಷನ್ ಯುನಿಟ್‍ಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇಎನ್‍ಟಿ ವಿಭಾಗಕ್ಕೆ ಕೊಡುಗೆಯಾಗಿ ಇಂದು ನೀಡಲಾಯಿತು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ವಿರೂಪಾಕ್ಷಪ್ಪನವರು ಮಲ್ನಾಡ್ ಎಒಐ ಶಾಖೆಯಿಂದ ಸ್ವೀಕರಿಸಲಾದ ಉಪಕರಣಗಳಿಗೆ ಚಾಲನೆ ನೀಡಿದರು.
ಈ ವೇಳೆ ಡಾ.ಗಂಗಾಧರ್ ಮಾತನಾಡಿ, 2015 ರಲ್ಲಿ ಪ್ರಾರಂಭವಾದ ಮಲ್ನಾಡ್ ಎಒಐ ಶಾಖೆ ಲೈವ್ ಸರ್ಜರಿ ವರ್ಕ್‍ಶಾಪ್, ಸಿಎಂಇ ಗಳು ಸೇರಿದಂತೆ ಅನೇಕ
ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಉಪಕರಣಗಳು ಕಿವಿ ಮತ್ತು ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಅಭ್ಯಸಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇಎನ್‍ಟಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಕಿರಿಯ ಇಎನ್‍ಟಿ ತಜ್ಞರಿಗೆ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಪಡೆಯಲು ಉಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಎಸ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟಿಲ್, ಮಲ್ನಾಡ್ ಎಒಐ ಕಾರ್ಯದರ್ಶಿ ಡಾ.ಲೋಹಿತ್ ಕುಮಾರ್, ಡಾ.ಅರುಣ್, ಡಾ.ಪುರುಷೋತ್ತಮ್, ಇಎನ್‍ಟಿ ತಜ್ಞರು, ವೈದ್ಯರು, ಶುಶ್ರೂಷಕಾಧೀಕ್ಷಕಿ ಅನ್ನಪೂರ್ಣ, ಪಿಜಿ ವಿದ್ಯಾರ್ಥಿಗಳು ಹಾಜರಿದ್ದರು.