ಹೊಸನಗರ: ಯೋಗವೆಂಬುದು ಮನುಷ್ಯನ ಸಾಧನೆಗೆ ಒಂದು ಕೊಂಡಿಯಾಗಿದ್ದು ಉದ್ದೇಶ ಸಾಧನೆಗೆ ಯೋಗವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ಹೊಸನಗರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಿನಾಯಕ ನಾವುಡರವರು ಹೇಳಿದರು.
ಪಟ್ಟಣದ ನೆಹರು ಮೈದಾನದಲ್ಲಿ ಇಂದು ಯೋಗ ದಿನದ ಅಂಗವಾಗಿ ಪ್ರೌಢ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯೋಗ ತರಬೇತಿ ನೀಡಿ ಮಾತನಾಡಿ, ಯೋಗ ಇದು ಉದ್ದಾಂತ ವೇದಾಂತ ಚಿಂತನೆ ಮಹಾತ್ಮಗಾಂಧಿಯವರ ಅಹಿಂಸೆಯ ಚಿಂತನೆಯ ನಂಬಿಕೆ ಮತ್ತು ಆಚರಣೆ ವಸುದೈವ ಕುಟುಂಬಕಂ ಚಿಂತನೆಯ ಮುಂದುವರೆದ ಭಾಗ ಎಂದು ಪರಿಗಣಿಸಲಾಗಿದೆ. ಮನುಕುಲದ ಒಗ್ಗಟ್ಟಿಗೆ ಒಂದು ಕುಟುಂಬ ಎನ್ನುವ ಪರಿಕಲ್ಪನೆ ಇದು ನೀಡುತ್ತಿದೆ ಒಡೆದ ಜಗತ್ತನ್ನು ಒಗ್ಗೂಡಿಸುವುವಲ್ಲಿ ಈ ಘೋಷವಾಕ್ಯ ಔಷಧಿಮಯ ಸಾಲಾಗಿ ಪರಿಣಮಿಸಿದೆ ಎಂದರು.
ಈ ಯೋಗ ಕಾರ್ಯಕ್ರಮಕ್ಕೆ ಆಗಮಿಸಿದ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯವರು ಯೋಗ ನಡೆಸಿ ಮಾತನಾಡಿ, ಪ್ರೇಮಭಾವವನ್ನು ಉತ್ತೇಜಿಸಿ ಇಡಿ ಒಂದು ಕುಟುಂಬದ ರೀತಿಯಲ್ಲಿ ಒಗ್ಗೂಡಿಸಬೇಕು ಎನ್ನುವುದು
ನಮ್ಮ ಗುರಿಯಾಗಿದ್ದು ಸಮಯಕ್ಕಾಗುವವನೇ ಸ್ನೇಹಿತನೆನ್ನುವ ಗಾದೆಯಲ್ಲಿಯೂ ಇದೆ. ಆರೋಗ್ಯ ಸಂಪತ್ತು ಸೌಹಾರ್ದತೆ ಸೃಜನಶೀಲತೆ ಮತ್ತು ಶಾಂತಿ ನೆಮ್ಮದಿಗಳೊಂದಿಗೆ ಆದರ್ಶ ಸಾಮಾಜಿಕ ಕ್ರಮ ನಿರ್ಮಿಸುವ ಗುರಿ ನಮ್ಮ ಮುಂದಿದೆ ಈ ಯೋಗದಿನದಿಂದ ನಾವೆಲ್ಲರೂ ಒಟ್ಟಾಗಿ ಈ ದೇಶ ಕಟ್ಟೋಣ ಒಂದಾಗಿ ಬಾಳೋಣ ಎಂದರು.
ಈ ಯೋಗ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಸುಹಾಸ್, ಸಹಶಿಕ್ಷಕರಾದ ರೇಣುಕೇಶ್, ಅಂಜಲಿ ಅಶ್ವಿನಿಕುಮಾರ್, ರಾಘವೇಂದ್ರ, ಸೌಮ್ಯ, ನಾಗವೇಣಿ, ಗಿರೀಶ, ಭಾಷ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾದ ಆಸೀನ ಬಾನು, ಎಸ್‌ಡಿಎಂಸಿ ಸದಸ್ಯರಾದ ಸತ್ಯನಾರಾಯಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.