ಸಾಗರ : ಜಗತ್ತಿಗೆ ಯೋಗದ ಮಹತ್ವ ಅರ್ಥವಾಗಿದೆ. ಜಗತ್ತಿನ ೧೮೨ ದೇಶದ ಪ್ರತಿನಿಧಿಗಳು ಅಮೇರಿಕಾದಲ್ಲಿ ನಡೆಯುತ್ತಿರುವ ಯೋಗದಿನದಲ್ಲಿ ಪಾಲ್ಗೊಳ್ಳುತ್ತಿದ್ದು, ಅದರ ನೇತೃತ್ವವನ್ನು ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ವಹಿಸುತ್ತಿರುವುದು ದೇಶದ ೧೪೦ ಕೋಟಿ ಜನರಿಗೆ ಸಂದ ಸಂತೋಷವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

.


ಇಲ್ಲಿನ ಅಜಿತ ಸಭಾಭವನದಲ್ಲಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗದಿನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.


ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರ ಅತ್ಯಂತ ಪ್ರಮುಖವಾಗಿದೆ. ದೈನಂದಿನ ಒತ್ತಡದ ನಡುವೆಯೂ ಯೋಗಾಭ್ಯಾಸ ಅಳವಡಿಸಿಕೊಂಡ ವ್ಯಕ್ತಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಿದೆ. ವಿಶ್ವಕ್ಕೆ ಯೋಗದ ಮಹತ್ವವನ್ನು ತಿಳಿಸಿ ಕೊಟ್ಟಿರುವುದು ಭಾರತ ಎನ್ನುವ ಹೆಮ್ಮೆ ಸದಾಕಾಲ ಉಳಿಯಲಿದೆ ಎಂದು ಹೇಳಿದರು.


ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ರಸ್ತೆ, ಸೇತುವೆ, ಬೃಹತ್ ಕಟ್ಟಡ ನಿರ್ಮಾಣದ ಜೊತೆಗೆ ಸಮಷ್ಟಿ ಆರೋಗ್ಯ ದೃಷ್ಟಿಯನ್ನು ಇರಿಸಿಕೊಂಡು ನರೇಂದ್ರ ಮೋದಿಯವರು

ಪ್ರಧಾನಿಯಾದ ತಕ್ಷಣ ಯೋಗವನ್ನು ಅನುಸರಿಸುವ ಸಂದೇಶ ನೀಡಿದ್ದರು. ಜೂನ್ ೨೧ರಂದು ಜಗತ್ತಿನ ಕೋಟ್ಯಾಂತರ ಜನರು ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವುದು ಸಂತೋಷದ ಸಂಗತಿ ಎಂದರು.


ಸೇವಾಸಾಗರ ವಿದ್ಯಾಸಂಸ್ಥೆಯ ಗೋಪಾಲಕೃಷ್ಣ ಮಾತನಾಡಿ, ನರೇಂದ್ರ ಮೋದಿಯವರು ೨೦೧೪ರಲ್ಲಿ ಪ್ರಧಾನ ಮಂತ್ರಿಗಳಾಗುತ್ತಿದ್ದಂತೆಯೆ ವಿಶ್ವಕ್ಕೆ ಯೋಗದ ಮಹತ್ವವನ್ನು ತಿಳಿಸಿಕೊಡುವ ಸಾರ್ಥಕ ಕೆಲಸ ಮಾಡಿದರು.

ಅಂದಿನಿಂದ ಇಂದಿನವರೆಗೆ ಒಂಬತ್ತು ವರ್ಷಗಳ ಕಾಲ ವಿಶ್ವದಾದ್ಯಂತ ಭಾರತದ ಯೋಗ ಪಸರಿಸಿದೆ. ನಿತ್ಯದ ಯೋಗಾಭ್ಯಾಸ ಮನುಷ್ಯನ ಎಲ್ಲ ರೋಗಗಳಿಗೆ ರಾಮಬಾಣ ಇದ್ದಂತೆ ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಲೋಕನಾಥ ಬಿಳಿಸಿರಿ ಉಪಸ್ಥಿತರಿದ್ದರು. ರಾಜೇಂದ್ರ ಪೈ ಸ್ವಾಗತಿಸಿ, ಸತೀಶ್ ಕೆ. ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!