ಆಧುನಿಕ ಜಗತ್ತಿನ ಒತ್ತಡ, ಜಂಜಾಟದಲ್ಲಿ ಸಿಲುಕಿದ ಮಾನವ ಎಲ್ಲಾ ಆದರ್ಶಗಳನ್ನು ಮರೆತು ಸ್ವಾರ್ಥಯುತವಾಗಿ, ಯಾಂತ್ರಿಕವಾಗಿ ಜೀವನ ನಡೆಸುತ್ತಿರುವ ಕಾಲಘಟ್ಟದಲ್ಲಿ, ಕಲಾವಿದರವರ ನಿಸ್ವಾರ್ಥ ಸೇವೆ ನಮ್ಮ ಭಾರತದ ಸಂಸ್ಕಾರ ಹಾಗೂ ಸಂಸ್ಕೃತಿಯ ಕನ್ನಡಿಯಾಗಿದೆ ಎಂದು ಸುರೇಖಾ ಮುರಳೀಧರ್ ಅಭಿಪ್ರಾಯಪಟ್ಟರು.
ಅವರು ಆದಿಚುಂಚನಗಿರಿ ಸಮುದಾಯ ಭವನ ದಲ್ಲಿ ನಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಾನಿ ಕಲಾವಿದರವರು ವೃತ್ತಿಯಲ್ಲಿ ಟೈಲರ್ ಆದರೂ, ಸಮಾಜ ಮುಖಿಯಾಗಿ ನಿಸ್ವಾರ್ಥ ಸೇವೆಯನ್ನು ಸಮಾಜದ ಕೆಳಸ್ತರದವರಿಗೆ ನೀಡುತ್ತಿರು ವುದು ಅತ್ಯಂತ ಉತ್ತಮ ಹಾಗೂ ಅನುಕರಣೀಯ.
ದಾನಿಗಳಾದ ಕಲಾವಿದರವರು ಮಾತನಾಡುತ್ತಾ, ಅವಿದ್ಯಾವಂತನಾದ, ನನ್ನ ಈ ರೀತಿಯ ಸೇವಾ ಚಟುವಟಿಕೆಗಳು ಕೆಲವು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯವಾಗುತ್ತಿರುವುದು ನನಗೆ ಸಾರ್ಥಕತೆಯನ್ನು ನೀಡುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಚಂದ್ರ ಕಾಂತ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಶಿವು ಪುಟ್ಟ ಸ್ವಾಮಿ, ಸೇವಾ ಚಟುವಟಿ ಕೆಯಲ್ಲಿ ಮಾದರಿಯಾಗಿರುವ ಸೋದರಿ ನಿವೇದಿತಾ ಪ್ರತಿಷ್ಠಾನವನ್ನು ಗೌರವಿಸಿ, ಸತ್ಕರಿಸಲಾಯಿತು.
ಮಹಮ್ಮದ್ ಷಫಿ, ಎಸ್ಸಿಐ ಶಿವಮೊಗ್ಗ ಭಾವನಾದ ಕಾರ್ಯದರ್ಶಿ ಸೀನಿಯರ್ ರತ್ನಲಕ್ಷ್ಮಿ ನಾರಾಯಣ್ ಖಜಾಂಚಿ ಮಂಜುನಾಥ್ ಜಂಟಿ ಕಾರ್ಯದರ್ಶಿ ವಾಣಿ ರತ್ನಾಕರ್ ಉಪಾಧ್ಯಕ್ಷೇ ಮಾಲಾ ರಾಮಪ್ಪ ಕವಿತಾ ರಾವ್ ಶಶಿಕಲಾ ಕವಿತಾ ಜಾಯ್ಸ್ ಸುಶೀಲ ಷಣ್ಮುಗಂ ವಾತ್ಸಲ್ಯ ಶೆಟ್ಟಿ ಸುಜಾತ ಪ್ರೇಮಾ ಇನ್ನಿತರರು ಉಪಸ್ಥಿತರಿದ್ದರು.