ಶಿವಮೊಗ್ಗ,
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವನ್ನು ಕಾರ್ಯಕರ್ತರ ಸಹಕಾರದೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ ಹೇಳಿದ್ದಾರೆ.


ಅವರು ಇಂದು ನಗರದ ನೆಹರೂ ರಸ್ತೆಯಲ್ಲಿರುವ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕದ ಪಾಲಿಕೆ ಕಟ್ಟಡದ ಎರಡನೇ ಮಹಡಿಯಲ್ಲಿ ತಮ್ಮ ಅಧಿಕೃತ ಕಚೇರಿ ಉದ್ಘಾಟಿಸಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು.


ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರೆಲ್ಲರೂ ಅತ್ಯಂತ ಉತ್ಸಾಹ ಮತ್ತು ಮೇಡಂ ಗೆಲ್ಲಲೇಬೇಕು ಎಂಬ ಛಲದಿಂದ ನನಗೆ ಜಯ ತಂದುಕೊಟ್ಟಿದ್ದಾರೆ. ಈ ಗೆಲುವು ನಿಮ್ಮೆಲ್ಲರ ಗೆಲುವು. ನಾನು ಸದಾ ಕಾರ್ಯ ಕರ್ತರೆಲ್ಲರಿಗೂ ಆಭಾರಿಯಾಗಿರುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ತಮ್ಮೆಲ್ಲರ ಸಲಹೆ, ಸಹಕಾರ ಪಡೆದು ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಇದು ನಿಮ್ಮ ಕಚೇರಿ. ಗೆದ್ದ ಮೇಲೆ ಎಲ್ಲಾ ಪಕ್ಷದವರುಕೂಡ ನನ್ನ ಕ್ಷೇತ್ರದವರೇ ಆಗಿದ್ದು, ಅವರ ಸೇವೆಗೆ ನಾನು ಸದಾ ಸಿದ್ಧ ಎಂದರು.


ನೀವು ಈಗ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದೀರಿ. ಗೆದ್ದ ಮೇಲೆ ಹಲವಾರು ಕಾರಣ ಗಳಿಂದ ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಂತಹಂತವಾಗಿ ಎಲ್ಲಾ ಗ್ರಾಮ ಗಳಿಗೂ ಭೇಟಿ ನೀಡುತ್ತೇನೆ. ಸಮಸ್ಯೆಗಳನ್ನು ಆಲಿಸುತ್ತೇನೆ. ಗ್ರಾಮಸ್ಥರಿಗೆ ನಮ್ಮ ಕಾರ್ಯಕರ್ತರು ತಿಳಿ ಹೇಳಬೇಕು ಎಂದರು.


ಜೆಡಿಎಸ್ ಹಿರಿಯ ನಾಯಕ ಆಯ ನೂರು ಮಂಜುನಾಥ್ ಮಾತನಾಡಿ, ಶಾಸಕರ ಜೊತೆಗಿರುವವರು ಕಾರ್ಯಕರ್ತರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಅವರ ನೋವು-ನಲಿವಿಗೆ ಸ್ಪಂದಿಸಬೇಕು. ಶಾಸಕರ ಆಭರಣದ ರೀತಿಯಲ್ಲಿ ಅವರನ್ನು ಪ್ರೀತಿಸುವ ಕಾರ್ಯಕರ್ತರ ರಕ್ಷಣಾ ದೇವಾಲ ಈ ಕಚೇರಿಯಾಗಬೇಕು. ಸದಾ ಕಾಯಕ ಮಾಡುವ ಸ್ಥಳ ಆಗಬೇಕು ಎಂದರು.


ಈಗ ವಿಪಕ್ಷ ಸ್ಥಾನದಲ್ಲಿ ನಮ್ಮ ಶಾಸಕರಿರಬಹುದು. ಕೆಲಸ ಮಾಡಿಸಿಕೊಳ್ಳು ವುದು ಸ್ಪಲ್ಪ ಕಷ್ಟವಾಗಬಹುದು. ಆದರೆ ಕ್ಷೇತ್ರದ ಅಗತ್ಯ ಕೆಲಸಗಳಿಗೆ ಸರ್ಕಾರ ಸ್ಪಂದಿಸದಿದ್ದಾಗ ಹೋರಾಟ ಮಾಡಿಯಾದರೂ ಜನತೆಯ ಮೂಲಭುತ ಸೌಕರ್ಯಗಳನ್ನು ಒದಗಿಸಬೇಕು ಎಂದರು.


ಹಿಂದಿನ ಶಾಸಕರಿರುವಾಗಿ ಬಹಳಷ್ಟು ಅಧ್ವಾನಗಳಾಗಿವೆ. ಏತನೀರಾವರಿ ಕಾಮಗಾರಿ ಗಳು ತಡವಾಗಿವೆ. ಮೂರು ದಿನದ ಹಿಂದೆ ಯಷ್ಟೇ ಬೂದಿಗರೆಗೆ ನೀರು ಬಂದಿದೆ ಇನ್ನೊಂ ದಿಷ್ಟು ನೀರಾವರಿ ಕೆಲಸಗಳು ಆಗಬೇಕಾಗಿವೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಾಂತರಾಜ್, ಸತ್ಯನಾರಾಯಣ್, ಗೀತಾ ಸತೀಶ್, ಮಹದೇವಪ್ಪ, ಹನುಮಂತಪ್ಪ, ಕುಮಾರ ನಾಯ್ಕ, ಸತೀಶ್, ರಾಜಣ್ಣ, ಬಸವರಾಜ್, ಇನಾಯತ್, ರೇಣುಕಾ, ರಮೇಶ್, ಭೋಜ್ಯಾ ನಾಯ್ಕ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!