ಕಾಲೇಜು ವಿದ್ಯಾರ್ಥಿಗಳಿಗೆ ಸಾಗರ ಸರ್ಕಾರಿ ಬಸ್ಸು ನಿಲ್ದಾಣದಿಂದ ಸಾಗರದ ಹೊರವಲಯ ಶಿವಮೊಗ್ಗ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಹೋಗಲು ಸರ್ಕಾರಿ ಬಸ್ಸುಗಳಿಲ್ಲದೇ ಬಸ್ಸು ನಿಲ್ದಾಣದಲ್ಲಿಯೇ ಜಮಾಯಿಸಿರುವ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ.


ವಿದ್ಯಾರ್ಥಿಗಳ ಪ್ರತಿಭಟನೆ ಮಾಹಿತಿ ಪಡೆದ ಕೆಎಸ್‌ಆರ್‌ಟಿಸಿ ಬಸ್ಸ್ ಡಿಪೋ ಮ್ಯಾನೇಜರ್ ರಾಜಪ್ಪನವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಅಹವಾಲು ಆಲಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಿರುವ ಕಾರ್ಗಲ್-ಜೋಗ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ ಅಗತ್ಯ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸದಿರುವ ಸರ್ಕಾರಿ ಬಸ್ಸುಗಳ ಡಿಪೋ ಮ್ಯಾನೇಜರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾರಣ ನೀಡಬೇಕು ಎಂದು ಒತ್ತಾಯಿಸಿದರು.


ಡಿಪೋ ಮ್ಯಾನೇಜರ್ ರಾಜಪ್ಪನವರು ಪ್ರತಿಕ್ರಿಯಿಸಿ ಬೆಳಿಗ್ಗೆ ೯-೩೦ ರೊಳಗೆ ಸಾಗರದಿಂದ ಶಿವಮೊಗ್ಗ ಮಾರ್ಗವಾಗಿ ಹೋಗುವ ನಮ್ಮ ಡಿಪೋದ ಎಲ್ಲಾ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ತೆರಳಬಹುದು ಎಂದು ಘೋಷಿಸಿದರು.ಇನ್ನು ಮಧ್ಯಾಹ್ನದ ನಂತರ ಕಾಲೇಜು ಬಿಡುವ ಸಮಯದಲ್ಲಿ ಸಾಗರ ಡಿಪೋ ಬಸ್ಸುಗಳು ಬರುವುದಿಲ್ಲ.ಆದ್ದರಿಂದ ಮದ್ಯಾಹ್ನನದ ನಂತರ ಕಾಲೇಜು ಬಿಡುವ ಸಮಯದಲ್ಲಿ ಇತರೆ ಬಸ್ಸುಗಳಲ್ಲಿಯೇ ಬರಬೇಕಿದೆ ಎಂದರು.


ಪೊಲೀಸರು ಬಸ್ಸು ನಿಲ್ದಾಣಕ್ಕೆ ಆಗಮಿಸಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ ದಿಡೀರ್ ಪ್ರತಿಭಟನೆ ಮಾಡುವುದರಿಂದ ಪ್ರಯಾಣಿಕರುಗಳಿಗೆ ಅಡಚಣೆಯಾಗುತ್ತದೆ.ಬಸ್ಸು ತಡವಾಗಿ ಬಂದಲ್ಲಿ ಬಸ್ಸು ನಿಲ್ದಾಣದಲ್ಲಿ ಸಮಯದ ವ್ಯತ್ಯಾಸಗಳ ಕುರಿತು ಪ್ರಶ್ನಿಸುತ್ತಾರೆ.ನಿಮ್ಮ ಸೇವೆಯಲ್ಲಿರುವ ಬಸ್ಸುಗಳ ನೌಕರರ ಹಿತವನ್ನು ಗಮನಿಸಬೇಕು ಎಂದು ತಿಳಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
ಸರ್ಕಾರಿ ಬಸ್ಸುಗಳ ಚಾಲಕರು,ನಿರ್ವಾಹಕರುಗಳು ಪ್ರತಿಕ್ರಿಯಿಸಿ ನಮಗೂ ಸರ್ಕಾರದ ನಿಯಮಗಳ ಪಾಲನೆ ಮಾಡುವುದು ಅನಿವಾರ್ಯವಾಗುತ್ತದೆ.ನಿಯಮ ಮೀರಿ ಸೇವೆ ನೀಡಲು ಸಾಧ್ಯವಿಲ್ಲ.ನಿಯಮಗಳಂತೆ ನಮ್ಮ ಸೇವೆಯನ್ನು ನೀಡುತ್ತೇವೆ ಎಂದರು.


ವಿದ್ಯಾರ್ಥಿಗಳು ಪ್ರತಿಕ್ರಿಯಿಸಿ ಕಾಲೇಜು ಆರಂಭವಾಗುವ ಮೊದಲು ಮತ್ತು ಕಾಲೇಜು ಬಿಟ್ಟ ನಂತರ ನಮಗೆ ಬಸ್ಸುಗಳ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.


ಶಾಸಕ ಬೇಳೂರು ಪ್ರತಿಕ್ರಿಯೆ:
ಸಾಗರಕ್ಕೆ ನಾನು ಬಂದಾಕ್ಷಣ ಸರ್ಕಾರಿ ಬಸ್ಸುಗಳ ಮ್ಯಾನೇಜರ್ ಹಾಗೂ ಕಾಲೆಜು ಪ್ರಾಂಶು ಪಾಲರೊಂದಿಗೆ ಸಮಾಲೋಚಿಸಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತಲುಪಲು ಅಗತ್ಯ ಬಸ್ಸುಗಳ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ದೂರವಾಣಿ ಮೂಲಕ ಭರವಸೆ ನೀಡಿದರು.ಇದರಿಂದ ಪ್ರಕರಣ ಸುಖಾಂತ್ಯಗೊಂಡಿತು.

By admin

ನಿಮ್ಮದೊಂದು ಉತ್ತರ

error: Content is protected !!