ಶಿವಮೊಗ್ಗ :/ತಾಯಿ ಎಂಬ ಪದವೇ ಮಹತ್ವವಾದುದಾಗಿದ್ದು, ತಾಯಿ ತನ್ನ ಕಾಲಿಗೆ ಚಕ್ರ ಹಾಕಿಕೊಂಡು ಎಲ್ಲ ಕೆಲಸವನ್ನು ಪೂರೈಸುತ್ತಾಳೆ. ಆ ತಾಯಿಯನ್ನು ಇಂದು ವಿಶೇಷವಾಗಿ ನೆನೆಸಿಕೊಳ್ಳುವ ದಿನವಾಗಿದೆ. ಭಾರತದಲ್ಲಿ ತಾಯಿಗೆ ಪ್ರತಿದಿನವೂ ನಾವೆಲ್ಲರೂ ಪೂಜಿಸುತ್ತೇವೆ ಎಂದು ಖ್ಯಾತ ಪ್ರಸೂತಿ ತಜ್ಱಎ ಡಾ. ರಕ್ಷಾ ರಾವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಮೈತ್ರಿ ಮೈ ಜುವೆಲ್ಸ್ ಆಭರಣ ಮಳಿಗೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದ ಅವರು, ಪ್ರತಿದಿನವೂ ನಾವೆಲ್ಲರೂ ತಾಯಿಯನ್ನು ಆರೈಕೆ ಮಾಡುವುದರ ಜೊತೆಗೆ ಆಕೆಯ ಜೊತೆಯಲ್ಲಿಯೇ ಇರುತ್ತೇವೆ. ಆದರೂ ಕೂಡ ಇಂದು ವಿಶೇಷವಾಗಿ ಆಕೆಗೊಂದು ದಿನವನ್ನಾಗಿ ಮೀಸಲಿಟ್ಟಿದ್ದೆವೆ. ನೋವಿನಲ್ಲೂ ಅಮ್ಮ, ಖುಷಿಯಲ್ಲಿದ್ದಾಗಲೂ ಅಮ್ಮ, ನಿದ್ರೆಯಲ್ಲಿದ್ದಾಗಲೂ ಅಮ್ಮ ಎಂದು ನಾವು ಕರೆಯುತ್ತಿರುತ್ತೇವೆ. ಎರಡಕ್ಷರದ ಪದದ ಮಹಿಮೆಯಲ್ಲಿ ಅಗಾಧವಾದ ಶಕ್ತಿ ಅಡಗಿದೆ ಎಂದರು.
ಅಕೆಗೊಂದು ಸಣ್ಣಪ್ರಮಾಣದಲ್ಲಿ ಖುಷಿಯನ್ನು ನೀಡುವ ದಿನ ಇದಾಗಿದೆ. 9 ತಿಂಗಳುಗಳ ಕಾಲ ಒಂದು ಜೀವಕ್ಕೆ ಉಸಿರು ನೀಡಿ, ಗರ್ಭದಲ್ಲಿಟ್ಟುಕೊಂಡು ಸಾಕಿ, ಸಲುಹುವ ಅಮ್ಮಳಿಗೆ ಎಷ್ಟು ನಮಿಸಿದರೂ ಸಾಲದು. ಮನೆಯ, ಕುಟುಂಬದ ಜವಬ್ದಾರಿಯ ಜೊತೆಗೆ ಹೊರಗೆ ಕರ್ತವ್ಯ ನಿರ್ವಹಿಸುವ ಅಮ್ಮನ ಸಲುವಾಗಿ ಈ ದಿನ ಆಚರಣೆ ಅರ್ಥಗರ್ಭಿತವಾಗಿದೆ ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ದಿನವನ್ನು ಮೈತ್ರಿ ಮೈ ಜುವೆಲ್ಸ್ ಸಂಸ್ಥೆವತಿಯಿಂದ ಆಚರಿಸಿದ್ದನ್ನು ಡಾ. ರಕ್ಷಾ ರಾವ್ ಶ್ಲಾಘಿಸಿದರು.
ಈ ಸಂದರ್ಭದಲ್ಲಿ, 92 ವರ್ಷದ ಭಾಗ್ಯಲಕ್ಷ್ಮಮ್ಮ ಅವರಿಗೆ ಮೈತ್ರಿ ಮೈ ಜುವೆಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ, ಮೈತ್ರಿ ಮೈ ಜುವೆಲ್ಸ್ ವತಿಯಿಂದ ಶೇ. ಶೂನ್ಯ ಮೇಕಿಂಗ್, ಶೇ. ಶೂನ್ಯ ವೇಸ್ಟೇಜ್ ಎಂಬ ಗೋಲ್ಡ್ ಸ್ಕೀಂನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಲಾಯಿತು. ಅದರಲ್ಲೂ ಮಹಿಳೆಯರಿಗಾಗಿಯೇ ವಿಶೇಷವಾಗಿ ಈ ಸ್ಕೀಂನ್ನು ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ವಿದುಷಿ ಶ್ವೇತ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಾ ಜಿ., ಮೈತ್ರಿ ಮೈ ಜುವೆಲ್ಸ್ ನ ಸಿಇಓ ಸೆಂಥಿಲ್ ವೇಲನ್, ಅನಿತಾ ಎಸ್., ಬಾಲಸುಂದರಿ, ಆನಂದನ್, ರಾಧಿಕಾ ಜಗದೀಶ್ ಸೇರಿದಂತೆ ಹಲವರಿದ್ದರು.