ಶಿವಮೊಗ್ಗ,ಅ.07:
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಅರ್ಚಕನಿಗೆ ಇಲ್ಲಿನ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ನೀಡಿದೆ.
ಜೈಲು ರಸ್ತೆ 2ನೇ ತಿರುವಿನ ಸಾಗರ್ ನರ್ಸಿಂಗ್ ಹೋಂ ಎದುರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಶಿವಕುಮಾರ್ ಅಲಿಯಾಸ್ ಕುಮಾರ್ ಎಂಬಾತನನ್ನು ದೋಷಿ ಎಂದು ಪರಿಗಣಿಸಿ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್ ಅವರು ಆರೋಪಿಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ನಿನ್ನೆ ಸಂಜೆ ತೀರ್ಪು ನೀಡಿದ್ದಾರೆ.
2016ರಲ್ಲಿ ಅರ್ಚಕ ಶಿವಕುಮಾರ್ ಅಪ್ರಾಪ್ತೆಗೆ ನೀನು ಮಂಕಾಗಿದ್ದೀಯಾ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವಂತೆ ಮಾಡುವುದಾಗಿ ಆಮಿಷ ತೋರಿಸಿ ದೇವಸ್ಥಾನಕ್ಕೆ ಕರೆಸಿ ಪೂಜೆಯ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು.
ಅಪ್ರಾಪ್ತೆ ನೀಡಿದ ದೂರಿನನ್ವಯ ಮಹಿಳಾ ಠಾಣೆ ಪೊಲೀಸರು ಅರ್ಚಕನ ವಿರುದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ ಕಾಯ್ದೆ)ಯಡಿ ಕೇಸು ದಾಖಲಿಸಿ ಬಂಧಿಸಿದ್ದರು. ತನಿಖೆ ಬಳಿಕ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯವು ಸುಧೀರ್ಘವಾಗಿ ವಿಚಾರಣೆ ನಡೆಸಿ ಅರ್ಚಕ ಶಿವಕುಮಾರ್ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. 25 ಸಾವಿರ ದಂಡ ವಿಧಿಸಿದೆ. ಈ ಹಣವನ್ನು ಸಂತ್ರಸ್ಥೆಗೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.
ಸರ್ಕಾರಿ ಅಭಿಯೋಜಕ ಕೆ.ಎಸ್.ಸತೀಶ್ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!